ದೇವರು

ದೇವರು

ಕವನ

ದೇವರೆಂದರೆ ಕಲ್ಲು ಶಿಲೆಗಳಲ್ಲ

ಗುಡಿ ಗೋಪುರ ದೊಳಗಿರುವುದಲ್ಲ

ಇಗರ್ಜಿ ಮಸೀದಿಯೊಳಗಿರುವುದಿಲ್ಲ

ನಿದ್ದೆಗೆಟ್ಟು ಪೂಜಿಸುವುದೂ ಸಲ್ಲ

ದೇವರಿರುವುದು ನಿನ್ನಂತರಂಗದಲ್ಲಿ

ನೀ ನುಡಿವ ಸವಿ ಮಾತುಗಳಲಿ

ನೀ ಮಾಡುವ ಸತ್ಕಾರ್ಯಗಳಲಿ

ನೀ ನಡೆವ ಧರ್ಮದ ಹಾದಿಯಲಿ

ಜಾತಿಗಳನು ಮೀರಿ ನಡೆವುದೇ ದೇವರು

ಮತಭೇದ ಮಾಡದಿರುವುದೇ ದೇವರು

ಮಾನವೀಯತೆಯಲಿರುವುದೇ ದೇವರು

ನಿನ್ನ ನೀ ನಂಬಿರುವುದೇ ದೇವರು

ಅನ್ಯರಲಿ ಪ್ರೀತಿಯಿರಬೇಕು

ಅನ್ಯರೊಡನೆ ಸಹಬಾಳ್ವೆ ಇರಬೇಕು

ಅನ್ಯರು ನಿನ್ನ ಮೆಚ್ಚುವಂತಿರಬೇಕು

ಅನ್ಯ ಧರ್ಮದಲೂ ನಂಬಿಕೆಯಿರಬೇಕು

ನೀನಿರುವ ಪರಿಸರ ಸ್ವಚ್ಛವಾಗಿಡು

ನಿನ್ನುಸಿರ ಗಾಳಿಯನು ಮಲಿನಗೊಳಿಸದಿರು

ನೀ ಕುಡಿವ ನೀರಿಗೆ ವಿಷ ಬೆರೆಸದಿರು

ನೀ ನೆಲೆಸಿದ ನೆಲವ ನಿರ್ಮಲದಲಿಡು.

-ಭಾಸ್ಕರ್ ನೆಲ್ಯಾಡಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್