ದೇವಸ್ಥಾನ ಮತ್ತು ಹೋಮಕುಂಡ

ದೇವಸ್ಥಾನ ಮತ್ತು ಹೋಮಕುಂಡ

ಬರಹ

ಕನಕಪುರ ರಸ್ತೆಯಲ್ಲಿ, ಯೆಡಿಯೂರು ಕೆರೆಯ ಸ್ವಲ್ಪ ಮುಂದೆ ಒಂದು ಅತಿ ಚಿಕ್ಕದಾದ ಅಷ್ಟ ಲಕ್ಷ್ಮಿ ಮತ್ತು ನರಸಿಂಹ ದೇವರ ದೇನಸ್ಥಾನ ಇದೆ. ಇದರ ಮಹಡಿಯ ಮೇಲೂ ಕಟ್ಟಿದ್ದಾರೆ. ಹೋಮ ಕುಂಡವನ್ನು, ಟಾರ್ ಹಾಕಿದ ರಸ್ತೆ ಅಗೆದು, ಮಾಡಿದ್ದಾರೆ. ಇದು ತೀರಾ ರಸ್ತೆಯ ಒಂದು ಪಕ್ಕದಲ್ಲಿರುವುದರಿಂದ, ಓಡಾಡುವ ಜನರ ಕಾಲು ಈ ಹೋಮ ಕುಂಡಕ್ಕೆ ತಗುಲುತ್ತದೆ. ಮತ್ತು ಈ ಕುಂಡವನ್ನು ಉಪಯೋಗಿಸಲು, ಹೋಮ ಮಾಡುವವರು, ರಸ್ತೆಯಲ್ಲೇ ಕುಳಿತು ಮಾಡಬೇಕಾಗಿದೆ. ಈ ರೀತಿ ಎಲ್ಲರ ಕಾಲೂ ತಗುಲುವ ಜಾಗದಲ್ಲಿ, ಹೋಮಕುಂಡ ಮಾಡುವುದು ಸರಿಯೇ ? ರಸ್ತೆ ಸರಕಾರದ ಆಸ್ತಿ ಅಲ್ಲವಾ? ಇದಕ್ಕೆ ಯಾರೂ ಪ್ರತಿಭಟಿಸುವವರಿಲ್ಲವೇ ?

ರಸ್ತೆಯಲ್ಲಿ ಹೋಮಕುಂಡ ಮಾಡುವುದು ಎಷ್ಟರಮಟ್ಟಿಗೆ ಸರಿ ? ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಶ್ಯಾಮಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet