ದೇವಿ ಓ ಜಗ ಜನನಿ
ಕವನ
ಬಂದೆನಿಂದೂ ನಿನ್ನ ಬಳಿಗೆ
ಚೆಂದದಿಂದಲಿ ಅಭಯ ನೀಡಿದೆ
ಮುಂದೆ ಸಲಹೋ ಶರಣು ಮಾತೆಯೆ
ನಿನ್ನ ಮಡಿಲಲಿ ಮಲಗಿಹೆ
ಕಟೀಲು ಕ್ಷೇತ್ರದೆ ನೆಲೆಯ ನಿಂತಿಹೆ
ದುರ್ಗಾದೇವಿಯೇ ಪಾವನೆ
ಭಕ್ತ ಜನರನು ಕೈಯ ಹಿಡಿದಿಹೆ
ಪೂಜ್ಯಳಾಗಿಹೆ ದೇವಿಯೆ
ನನ್ನ ಹರಣವಾಗ್ವ ಸಮಯದೆ
ಬಂದು ನಿಂತೆಯೋ ಮುಂದೆಯೆ
ನಾನು ಇರುವೆನೋ ಬೆನ್ನ ಹಿಂದೆಯೆ
ಎನುತ ಧೈರ್ಯವ ಕೊಟ್ಟಿಹೆ
ಯಾವ ಕಾಲಕು ನೀನೆ ತಾಯಿಯೆ
ಎನುತ ಬಂದಿಹೆ ಬದುಕಲೆ
ಕುಲದ ದೇವತೆಯಾಗಿ ನೆಲೆಸಿಹೆ
ಶಾಶ್ವತವೋ ಎನ್ನ ಮನದಲೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
