ದೇವುಡು ಲೋಕಕಥನ
ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದ ಪ್ರಮುಖರಲ್ಲಿ ದೇವುಡು ನರಸಿಂಹ ಶಾಸ್ತ್ರಿಗಳೂ ಒಬ್ಬರು. ಭಾರತೀಯ ಪರಂಪರೆಯನ್ನೂ ಶಾಸ್ತ್ರಸಾಹಿತ್ಯವನ್ನೂ ವೇದಾಂತವನ್ನೂ ಅವರಂತೆ ಸಾಹಿತ್ಯಗಳ ಮೂಲಕ ಜನಸಾಮಾನ್ಯರಿಗೆ ಪರಿಚಯಿಸಿದವರು ವಿರಳ. ಅವರ ಮೂರು ಮಹತ್ವದ ಕೃತಿಗಳಾದ ಮಹಾದರ್ಶನ, ಮಹಾಬ್ರಾಹ್ಮಣ, ಮಹಾಕ್ಷತ್ರಿಯಗಳನ್ನು ಕುರಿತು ನಾವೆಲ್ಲ ಕೇಳಿಯೇ ಇದ್ದೇವೆ. ಅವರ ಮಯೂರ ಕಾದಂಬರಿಯೇ ಸಿನೆಮಾ ಆಗಿ, ಮನೆಮನೆಗೂ ತಲಪಿದ್ದು ಇತಿಹಾಸ. ಇವುಗಳಲ್ಲದೆ ಅವರು ಹಲವಾರು ಸಾಮಾಜಿಕ, ಮನೋವೈಜ್ಞಾನಿಕ, ಐತಿಹಾಸಿಕ ಕಾದಂಬರಿಗಳನ್ನೂ ಬರೆದಿದ್ದಾರೆ. 'ಯೋಗವಾಸಿಷ್ಠ'ದ ಸಂಪುಟಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ.
ದೇವುಡು ನರಸಿಂಹಶಾಸ್ತ್ರಿಗಳು ಧರ್ಮ, ಸಂಸ್ಕೃತಿ, ಸಂಪ್ರದಾಯ, ವೇದಾಂತ, ಪರಂಪರೆ ಮೊದಲಾದ ವಿಷಯಗಳನ್ನು ಕುರಿತು ಬರೆದ ಲೇಖನಗಳು ‘ದೇವುಡು ಲೋಕಕಥನ’ ವೆಂಬ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟವಾಗಿದೆ. ಭಾರತೀಯ ಸಂಸ್ಕೃತಿ-ಸದಾಚಾರಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಈ ಕೃತಿ ಮಹತ್ವದ್ದಾಗಿದೆ. ಒಟ್ಟು 548 ಪುಟಗಳ, 1/8 ಡೆಮಿ ಅಳತೆಯ, ರಟ್ಟಿನ ಬೈಂಡಿಂಗ್ ಇರುವ ಕೃತಿಯು ಚೆನ್ನಾಗಿದೆ.
-ಸುಭಾಷ್ ರಾವ್, ಬೋಳೂರು