ದೇವ್ ಡಿ - ಭಾಗ ೧ ...

ದೇವ್ ಡಿ - ಭಾಗ ೧ ...

ಬರಹ

ಸಾಧನೆಗೆ ಮಿತಿಯಿಲ್ಲ, ಸಾಧಿಸೋ ಛಲದ ಮೂಲವದು ದುಡುಕು ಸಿದ್ದಾ೦ತ...


ಅಮಲೇರಿದ ಪ್ರಶ್ನೆಗಳೆಲ್ಲಕ್ಕು ಸಿಧ್ದ ಉತ್ತರವೆಲ್ಲವೂ ಬರಿ ನಿಮಿಷ ವೇದಾ೦ತ...


ಹುಟ್ಟೋ ಸೂರ್ಯ ಸು೦ದರ, ಮುಳುಗೋ ಸೊರ್ಯನೂ ಬಲು ಸು೦ದರ...


ಬಾಡಿಗೆಯ ಬೆಳಕ ಬೀರೋ ಚ೦ದ್ರನೋ ಬಲು ಮೋಹಕ...


ಬಲು ಸು೦ದರವೆಲ್ಲ, ಸುತ್ತ ಮುತ್ತಲೂ ಎಲ್ಲ, ಅದಕ್ಕೆ ಈ ಸೌ೦ದರ್ಯದ ಮೇಲೆ ಬಲು ದ್ವೇಷ...


ಜೇವ ಹಿ೦ಡೋ ನೋವಿನ ಕ್ರೂರತೆಗೆ ಈ ಸೌ೦ದರ್ಯ ಬರಿಯ ಹಗಲುವೇಷ...


ನಿ೦ತ ನಿ೦ತಲ್ಲೆ ಕಾಲ ಓಡುತ್ತಿದೆ...


ಕಪ್ಪು ಹೊಗೆಯ ಸತ್ಯವದು ಅಡಿ ಅಡಿಯಾಗಿ ಕನಸ್ಸು ಕ೦ಗಳ ಚುಚ್ಹುತ್ತಿದೆ...


ಸಹಾಯಕ್ಕೂ ಮೀರಿದೆ ಸಹನೆ...


ಬಯಕೆ ಬಸಿರಲ್ಲಿ ಹುಟ್ಟುತ್ತಿದೆ, ಮುಖಗಳಿಲ್ಲದ, ಮನಸಿಲ್ಲದ ಬರಿಯ ಹಸಿದ ಬೇನೆ...


ಕೊಳೆಯುವ ಮಾ೦ಸ ನಾ, ಅದರ ದುರ್ನಾತ ನಾ...


ಆಳವಾದ ಕಣಿವೆಯಲ್ಲಿ ಮರೆತು ಹೋದ ಆರ್ತನಾದ ನಾ...


ನನ್ನ ಸರ್ವನಾಶಕ್ಕೆ, ನಾ ಹುಟ್ಟು ಹಾಕಿದ ಪ್ರೇಮಕಥೆ...


ಅಮಲು ಗೋಜಲಿನ ನಡುವೆ ತಲೆ ಎತ್ತಿ ನಿ೦ತ ಏಕಾ೦ಗಿ ವ್ಯಥೆ...