ದೇಶಭಕ್ತಿ ಹೊಮ್ಮಿಸಬೇಕೆ?ಬಂದಾಗ ಬರಲಿ ಎಂದು ಬಿಡಬೇಕೇ..
ಬರಹ
ನಮ್ಮ ಹಿರಿಯರು ಹೇಳುವ ಪ್ರಕಾರ ಸ್ವಾತಂತ್ರ್ಯ ಬಂದು ಕೆಲ ವರುಷಗಳ ವರೆಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಹಬ್ಬದ ಹಾಗೆ ಆಚರಿಸುತ್ತಿದ್ದರಂತೆ.ಎಲ್ಲೆಡೆ ತಳಿರು ತೋರಣ ಕಟ್ಟಿ, ರಂಗೋಲಿ ಹಾಕಿ,ಸುತ್ತಮುತ್ತಲ ಪ್ರದೇಶ ಸುಂದರವಾಗಿಸಿ,ಕೂಡಿ ಧ್ವಜಾರೋಹಣ ಮಾಡಿ,ಸಿಹಿ ಹಂಚಿ ಆನಂದಿಸುತ್ತಿದ್ದರಂತೆ.ಆದರೆ ಬರಬರುತ್ತ ಅದರ ಆಚರಣೆ ಕಳಪೆ ಆಗುತ್ತಾ ಬಂದಿತು.ಅ ದಿವಸದ ಆಚರಣೆ ರಾಜಕಾರಣಿಗಳಿಗೆ,ಶಾಲಾ ಮಕ್ಕಳಿಗೆ ಶಿಕ್ಷಕರಿಗೆ,ಕೆಲ ಸಂಘಟನೆಗಳಿಗೆ ಮಾತ್ರ ಸೀಮಿತ ವಾಗತೊಡಗಿತು.ಸರಕಾರೀ ಕಛೇರಿಗಳಲ್ಲೂ ಗಣನೀಯವಾಗಿ ಸಂಖ್ಯೆ ಇಳಿಕೆ ಆಗುತ್ತಿದ್ದಂತೆಯೇ.ಅದನ್ನು ಕಡ್ಡಾಯ ಮಾಡಿದರು.ಅಂದು ಎಂಥದೇ ತುರ್ತು ಕಾರಣ ಹೇಳಿ ಬರದೆ ಇದ್ದವರನ್ನು ವಿಚಾರಣೆ ಮಾಡದೇ ಅಮಾನತು ಗೊಳಿಸುವ ನಿಯಮ ಇದೆ !!
ಆದರೆ ಸರ್ಕಾರಿಯೇತರ ವರ್ಗದ ಜನರು ಈ ದಿವಸ ವನ್ನೂ ಅದರ ಮಹತ್ವ ವನ್ನು ಅಲಕ್ಷ್ಯ ಮಾಡುತ್ತಾ ಬಂದಿದ್ದಾರೆ.ಯಾವ ಪುರುಷಾರ್ಥಕ್ಕೆ ಆಚರಿಸಬೇಕು?ಎಲ್ಲಾ ದಿನದ ಹಾಗೇ ಇದೂ ಒಂದು ದಿನ ಅಷ್ಟೇ ಎನ್ನುವ ಜನರು ತುಂಬಿ ತುಳುಕುತ್ತಿದ್ದಾರೆ.ಧ್ವಜ ಹಾರಿಸಿದರೆ ಇಷ್ಟೇ ಅಭಿಮಾನ,ಭಕ್ತಿ ಏನು ಎನ್ನುವ ಹಾರಿಕೆ ಉತ್ತರ ಕೊಡುತ್ತಾರೆ.ಸ್ವಾತಂತ್ರ್ಯ ದಿನಾಚರಣೆ ಎಂದರೆ ರಜಾ ದಿನ ಮಜಾ ದಿನ ಎಂಬುದು ಅಘೋಷಿತವಾಗ್ತಾ ಇದೆ .ಹೇಳುವವರು ಕೇಳುವವರು ಇಲ್ಲವೇ ಇಲ್ಲ ಎಂತಾಗಿದೆ.
ಧ್ವಜರೋಹಣ ವನ್ನು ಎಲ್ಲಾರೂ ಸೇರಿ ಒಂದು ಕಡೆ ಮಾಡುವ ಉದ್ದೇಶ ದೇಶಪ್ರೇಮ ಮೆರೆಯುವುದಷ್ಟೇ ಅಲ್ಲ.ಒಗ್ಗಟ್ಟಿನ ಬಲ ಪ್ರದರ್ಶನ,ನಮ್ಮ ಗಡಿಯಲ್ಲಿ ನಿಂತು ಕಾಯುತ್ತಿರುವ ಸಹಸ್ರಾರು ವೀರ ಯೋಧರಿಗೆ ನಾವೆಲ್ಲಾ ನಿಮ್ಮ ಜೊತೆಗೆ ಇದ್ದೇವೆ.ಎಂದು ಹೇಳುವ ಒಂದು ಸುಸಮಯ.ಅಷ್ಟೇ ಅಲ್ಲ ನಮ್ಮ ಇಂದಿಗಾಗಿ ತಮ್ಮ ದಿನಗಳನ್ನು ಕಳೆದುಕೊಂಡ ದೇಶಭಕ್ತರನ್ನು ನೆನೆಯಲು ಒಂದು ಕಾರಣ ಸಹ ಅಂತ ನನ್ನ ನಂಬಿಕೆ.
ಧ್ವಜಾರೋಹಣಕ್ಕೆ ಎಲ್ಲಾ ನಾಗರೀಕರ ಹಾಜರಿ ಕಡ್ಡಾಯ ಮಾಡಬೇಕೆ?ಹಾಗೇ ಮಾಡಿದರೆ ಅದು ಸರಿಯಾದ ಕ್ರಮವೇ ?ಅದರಿಂದ ದೇಶಪ್ರೇಮ,ಒಗ್ಗಟ್ಟು ಬಂದೀತೆ?ಅಥವಾ ದೇಶಭಕ್ತಿ ಅನ್ನುವುದು ಅವರ ಮನಸ್ಸಿಗೆ ಬಂದಾಗ ಬಂದು ಹಾಜರಾಗಲಿ ಎಂದು ಬಿಡಬೇಕೇ?
ನಿಮ್ಮ ಅಭಿಪ್ರಾಯ ಏನು..?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ