ದೈವ ರೂಪಿ

ದೈವ ರೂಪಿ

ಕವನ

ಮಳೆ,ಗಾಳಿ,ಚಳಿ, ಬಿಸಿಲು

ಮರದ ರಂಬೆ,ಕೊಂಬೆ ಬೀಸಲು

ಭುವಿಗೆ ಚಾಮರ ಹಿಡಿದು ನಿಂತವು

ಭುವಿಯಡಿಯಲ್ಲಿ ಬೇರಿನಲ್ಲಿ ಕುಂತವು.

 

ಬೀಜದಿಂದ ಚಿಮ್ಮಿ ಚಿಗುರಿ ಬೆಳೆದು

ಭುವಿಯ ಸಾರ ಹೀರಿ ಹೀರಿ ನಲಿದು

ಜಿಗುರು ಕಾಂಡ,ಕುಡಿಗಳಿಗೆ ಹಂಚಿತು

ಸಾರ್ಥಕತೆಯಲ್ಲಿ ತನ್ನತನ ಮೆರೆಸಿತು.

 

ಭುವಿಯ ಅಪ್ಪಿ ಹಿಡಿದ ಮರ

ತಂಗಾಳಿಯ ತಂಪಿನಲ್ಲಿಹ ಸ್ವರ

ಮಧುರತೆಯ ಕಂಪನ್ನು ಹರಡುತ

ತೂಗಿ- ಬಾಗಿ ಗಾಳಿಯಲ್ಲಿ ಆಡುತ.

 

ರೆಂಬೆರೆಂಬೆ ಕೊಂಬೆಯಲ್ಲು ಚಿಗುರೆಲೆ

ಬಲಿತೆಲೆ, ಮಾಗಿದೆಲೆ, ಹಣ್ಣುಹಣ್ಣಲೇ

ನಕ್ಕು,ನಲಿದು ಮಾತು, ಮಾತುಕತೆಯಲಿ

ನನಗೆ ನೀನು- ನಿನಗೆ ನಾನೆನ್ನುತಲಿ...

 

ಉಸಿರ ಸೂಸಿ ಫಲವನೀವ ಮರಗಳು

ಸಮ್ಮೂಲದಲ್ಲಿ ಸಂಪದ್ಭರಿತ ಫಲಗಳು

ನೀನಾರಿಗಾದೆಯೋ ಎಲೇ ಮಾನವನೇ?

ಬೆನ್ನಲ್ಲಿ ಬಿದ್ದವರನ್ನೇ ಹಿಸಿದು ತಿನ್ನುವವನೆ.!!

 

ಭೂಮ್ಯಾಕಾಶವೇ ನನ್ನ ಮನೆ,ಮನುಜನೆ

ನಿನ್ನ ಆಸೆಗಿಲ್ಲವೇ ಎಂದೂ ಕೊನೆ

ಸುಟ್ಟುಬಿಡು ನಿನ್ನ ಅತಿಯಾಸೆಯನ್ನು

ಇದ್ದುಬಿಡು ನನ್ನ ಹಾಗೆ ದೈವರೂಪಿಯಾಗಿ.

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

 

ಚಿತ್ರ್