ದೊಡ್ಡದು ಮತ್ತು ಚಿಕ್ಕದು

ದೊಡ್ಡದು ಮತ್ತು ಚಿಕ್ಕದು

ಬರಹ

  ದೊಡ್ಡದು ಮತ್ತು ಚಿಕ್ಕದು

ಕಿರಿದು ಕಿರಿದೆಂದು ಮೂಗು ಮುರಿಯುವಿರೇಕೆ ?
ಕಿರಿದೇ ಹಿರಿಯದರ ಮೂಲವೆಂದು ಬಲ್ಲಿರೇನು ?

ಕಿರಿಯ ಬೀಜವೇ ತಾನೆ ಹೆಮ್ಮರವಾಗುವುದು ?
ಕಿರಿಯ ಚಿಲುಮೆಯೇ ತಾನೆ ಮಹಾನದಿಯಾಗುವುದು ?
ಕಿರಿಯ ಕಿಡಿಯೇ ತಾನೆ ಕಾಡ್ಗಿಚ್ಚ ಹರಡುವುದು ?

ಹಿರಿದು ಬಂಡೆಯಿಂದ ಸಾಧ್ಯವೆ ವಿದ್ಯುತ್ ಪ್ರವಾಹ ?
ಎಲೆಚ್ಟ್ರಾನ್ ಅತಿ ಕಿರಿ ಕಣವಲ್ಲಿರಲೇಬೇಕಲ್ಲವೆ ?
ಇದರ ಹೊರತು ಎಲ್ಲಿತ್ತು ವಿದ್ಯುನ್ಮಾನ ?
ಜಗದಲ್ಲಿ ನೆಲೆಸುತ್ತಿತ್ತೇ ತಂತ್ರಜ್ಞಾನ ?

ವಿಶ್ವದುಗಮವೂ ಕಿರಿಯ ಬಿಂದುವಿನಿಂದ.
ಕಾಲದುಗಮವೂ ಅಲ್ಲಿಂದಲೇ..

ಹೀಗಿರಲು ನೀವೇ ಹೇಳಿ
ಹಿರಿದು ಹಿರಿದೋ? ಕಿರಿದು ಹಿರಿದೋ ???