ದೊಣ್ಣೆಮೆಣಸಿನ ರಾಯಿತ
ಬೇಕಿರುವ ಸಾಮಗ್ರಿ
ದೊಣ್ಣೆಮೆಣಸು ೧, ಮೊಸರು ೧ ಕಪ್, ಸಾಸಿವೆ ೧/೨ ಚಮಚ, ಜೀರಿಗೆ ೧/೨ ಚಮಚ, ಉದ್ದಿನಬೇಳೆ ೧/೨ ಚಮಚ, ಕೆಂಪು ಮೆಣಸು ೨, ಅರಸಿನ ಪುಡಿ ೧/೪ ಚಮಚ, ಕರಿಬೇವು ೬ ಎಸಳು, ಉಪ್ಪು, ಎಣ್ಣೆ ೨ ಚಮಚ.
ತಯಾರಿಸುವ ವಿಧಾನ
ದೊಣ್ಣೆ ಮೆಣಸನ್ನು ಸಣ್ಣಗೆ ಚೌಕಾಕಾರಕ್ಕೆ ಹೆಚ್ಚಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕೆಂಪುಮೆಣಸಿನ ಚೂರುಗಳನ್ನು ಹಾಕಿ ಸಾಸಿವೆ ಸಿಡಿದಾಗ ಕರಿಬೇವು ಮತ್ತು ದೊಣ್ಣೆ ಮೆಣಸಿನ ಚೂರುಗಳನ್ನು ಹಾಕಿ ಬಾಡಿಸಿ. ನಂತರ ಅರಸಿನ ಪುಡಿ, ಉಪ್ಪಿನ ಪುಡಿ ಹಾಕಿ ಬೆರೆಸಿ. ಒಲೆಯಲ್ಲಿ ಸ್ವಲ್ಪ ಹೊತ್ತು ಮಗುಚುತ್ತಾ ಇರಿ. ಬಾಣಲೆಯನ್ನು ಇಳಿಸಿ. ತಣಿದ ನಂತರ ಮೊಸರನ್ನು ಹಾಕಿ ಕಲಸಿ. ಈಗ ದೊಣ್ಣೆಮೆಣಸಿನ ರಾಯಿತ ಸವಿಯಲು ತಯಾರಾಯಿತು.
- ಸಹನಾ ಕಾಂತಬೈಲು, ಮಡಿಕೇರಿ