ದೋಣಿ

ದೋಣಿ

ಬರಹ

ದೋಣಿ (ನಾಮಪದ) {ಕನ್ನಡರೂಪ}
ದೊಡ್ಡ ಹೊಟ್ಟೆಯವಳು; ಡೊಳ್ಳುಹೊಟ್ಟೆಯವಳು (ಆ ದೋಣಿ ಹೇಗೆ ಓಡಬಲ್ಲಳು?-ರೂಢಿ)

ದೋಣಿ (ನಾಮಪದ) {ಪಾಳಿ, ಪ್ರಾಕೃತರೂಪ}
೧. ನೀರು ತುಂಬಲು ಇರುವ ತೊಟ್ಟಿ; ನೀರಿನ ತೊಟ್ಟಿ ೨. ಅಗಲವಾದ ಬಾಯಿಯನ್ನು ಹೊಂದಿರುವ ಪಾತ್ರೆ ೩. (ಧಾನ್ಯಗಳನ್ನು ತುಂಬಿಡುವ ಅಂಡಾಕಾರವಾದ) ದೊಡ್ಡ ಹರವಿ; ಗುಡಾಣ ೪. ತಟ್ಟೆ; ಹರಿವಾಣ ೫. (ಮಳೆಯ) ನೀರು ಬಿದ್ದು ಹರಿದುಹೋಗಲು ಮನೆಯ ಮಾಳಿಗೆಗೆ ಅಳವಡಿಸಿದ ಕೊಳವೆ; ಹರಿನಾಳಿಗೆ ೬. ನೀರಿನ ಮೇಲೆ ತೇಲುವ ಸಾಧನ; ನಾವೆ; ತೆಪ್ಪ; ಹರಿಗೋಲು ೭. ಅಭಿಷೇಕದ ನೀರನ್ನು ತುಂಬುವ ಪಾತ್ರೆ ೮. ದನಗಳಿಗೆ ನೀರು ಹಾಕಲೆಂದು (ಮರದಿಂದ ಅಥವಾ ಕಲ್ಲಿನಿಂದ) ಮಾಡಿರುವ ಎಡೆ

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet