ದ್ಯಾವ್ರು ಯಾರು ಗೊತ್ತೇನ್ಲಾ ನಿಂಗೆ?

ದ್ಯಾವ್ರು ಯಾರು ಗೊತ್ತೇನ್ಲಾ ನಿಂಗೆ?

ಕವನ

 ದ್ಯಾವ್ರು ಯಾರು ಗೊತ್ತೇನ್ಲಾ ನಿಂಗೆ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
 

ದ್ಯಾವ್ರೇ ನಮ್ಮನ್ನೆಲ್ಲಾ ಉಟ್ಟಿಸಿದ್ದು ಅಂತ ನಂಬ್ಕೆ ಐತೋ ಇಲ್ವೋ ನಿಂಗೆ?
ಅಸಿವಾದಾಗೆಲ್ಲಾ ಅಳಕ್ಕೆ ಮುಂಚೆನೇ ಊಟ ಕೊಟ್ಟದ್ದು ದ್ಯಾವ್ರಲ್ವಾ ನಮ್ಗೆ?
 
ತುಂಟತನ ಮಾಡ್ಕಂಡು, ಕಷ್ಟದಾಗೆ ಸಿಕ್ಕಿ ಹಾಕ್ಕಂಡು ಕಿರಿಚಿ ಆತ್ತಾಗೆಲ್ಲ
ಸೊಂಟದ ಮ್ಯಾಗೆ ಎತ್ಕಂಡು, ಹಾಗೆ ಯಾಕೆ ಮಾಡ್ದೆ ಮಗಾ ಅಂತೆಲ್ಲಾ
 
ಇನ್ನೊಂದು ಕಿತ ಅಂಗೆ ಮಾಡಬಾರದು ತಿಳೀತಾ ಪುಟ್ಟ ಅಂತ ತಬ್ಬಿದ್ದು
ಮತ್ತೊಂದು, ಮಗದೊಂದು ಅಂತ ತಪ್ಪಿನ ಮೇಲೆ ತಪ್ಪು ಮತ್ತೆ ಮಾಡಿದ್ದು
 
ನೆನಪೈತ ನಿನ್ ಮೊದ್ದು ತಲೆಗೆ? ಆ ದ್ಯಾವ್ರು ಬಗ್ಗೆ ನಿಂಗೆ ಏನಾರ ಗೊತ್ತೈತಾ?
ನಂಗೂ, ನಿಂಗೂ, ಅಟ್ಟಿಯ ಮನೆಗೆಲ್ಲಾ ಆ ದ್ಯಾವ್ರು ಹೆಣ್ಣೇ ಅಂತ ತಿಳಿದೈತಾ?