ದ್ರಾಕ್ಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ (ಭಾಗ ೨)

ದ್ರಾಕ್ಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ (ಭಾಗ ೨)

ಲಘು ಪೋಷಕಾಂಶಗಳು:

ಕಬ್ಬಿಣ:- ಕಬ್ಬಿಣದ ಕೊರತೆಯಿಂದಾಗಿ ಎಲೆಗಳು ತಿಳಿ ಹಳದಿ ಬಣ್ಣಕ್ಕೆ ತಿರುಗಿ ಎಲೆಗಳ ಮೇಲೆ ಹಸಿರು ನರಮಂಡಲ ಕಂಡುಬರುವುದು. ಕೊರತೆಯು ತೀವ್ರವಾದಾಗ ಎಲೆಗಳು ಹಳದಿಯಾಗುತ್ತ ಮುಂದೆ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಮುಂದೆ ಎಲೆಗಳ ಮೇಲೆ ಕಂದು ಚುಕ್ಕೆಗಳು ಕಂಡುಬರುತ್ತವೆ. ತೀವ್ರ ತರವಾದ ಕೊರತೆಯಿಂದ ದೇಟುಗಳ ಬೆಳವಣಿಗೆ ಕಡಿಮೆಯಾಗುವುದು.

ಕಬ್ಬಿಣದ ಕೊರತೆಯನ್ನು ಸರಿಪಡಿಸಲು ಸುಮಾರು ಪ್ರತಿಶತ ೦.೨ ತಟಸ್ಥ ಪಿ.ಎಚ್. ಹೊಂದಿದ ಕಬ್ಬಿಣದ ಸಲ್ಫೇಟ್ ದ್ರಾವಣದ ಸಿಂಪರಣೆ ಮಾಡಬೇಕು. ಕೊರತೆಯ ಪ್ರಮಾಣವನ್ನು ಆಧರಿಸಿ ಸಿಂಪರಣೆಯನ್ನು ೧೫ ದಿನಗಳ ಅಂತರದಲ್ಲಿ ಪುನಃ ನೀಡಬೇಕು. ಪ್ರತಿ ವರ್ಷ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಸುಮಾರು ೪೦ ರಿಂದ ೫೦ ಕಿ.ಗ್ರಾಂ. ಕಬ್ಬಿಣದ ಸಲ್ಫೇಟನ್ನು ಹನಿ ನೀರಾವರಿಯ ಡ್ರಿಪ್ಪರಗಳ ಕೆಳಭಾಗದಲ್ಲಿ ನೀಡುವುದು ಸೂಕ್ತವೆಂದು ಕಂಡುಕೊಳ್ಳಲಾಗಿದೆ. 

ಸತು:- ಸತುವಿನ ಕೊರತೆಯ ಲಕ್ಷಣಗಳು ಸಾಮಾನ್ಯವಾಗಿ ಬಳ್ಳಿಯ ಹೊಸ ಬೆಳವಣಿಗೆಗಳ ಮೇಲೆ ಹಾಗೂ ಪ್ರಾಥಮಿಕ ಚಿಗುರುಗಳ ಮೇಲೆ ಕಂಡುಬರುತ್ತವೆ. ಸತುವಿನ ಕೊರತೆಯಿರುವ ಬಳ್ಳಿಗಳ ಎಲೆಗಳು ಕಮರಿದಂತಾಗಿ ಮುಂದೆ ವಿರೂಪವಾಗುತ್ತವೆ. ಅತೀ ಹೆಚ್ಚು ಕೊರತೆ ಕಂಡುಬಂದಂತಹ ಪ್ರಸಂಗಗಳಲ್ಲಿ ಎಲೆಗಳು ಸಾಮಾನ್ಯವಾಗಿ ಕಡಿಮೆ ಗಾತ್ರ ಹೊಂದುತ್ತವೆ. ಹಾಗೂ ಇಂಟರ್ ನೋಡ್ ಗಳ ಗಾತ್ರ ಕಡಿಮೆಯಾಗುವುದು.

ಪ್ರತಿ ಹೆಕ್ಟೇರಿಗೆ ೨೦-೩೦ ಕಿ.ಗ್ರಾಂ. (ಪ್ರತಿ ವರ್ಷಕ್ಕೆ) ಪ್ರಮಾಣದಲ್ಲಿ ಮೂರರಿಂದ ನಾಲ್ಕು ಸಲ ವಿಭಜಿಸಿ ನೀಡಬೇಕು. ಸತುವಿನ ಸಲ್ಫೇಟನ್ನು ಮಣ್ಣಿಗೆ ಸೇರಿಸುವುದಕ್ಕಿಂತ ಮುಂಚೆ ೮ ರಿಂದ ೧೦ ದಿನಗಳವರೆಗೆ ಸೆಗಣಿಯ ರಾಡಿಯಲ್ಲಿ ನೆನೆ ಹಾಕಿ ಕೊಡುವುದು ಸಾಮಾನ್ಯ ರೂಢಿಯಾಗಿದೆ. ಈ ಸಗಣಿಯ ರಾಡಿಯನ್ನು ಸವರುವ ಸಮಯದಲ್ಲಿ ಎರಡರಿಂದ ಮೂರು ಸಲ ನೀಡಬೇಕು. ಸತುವಿನ ಸಲ್ಫೇಟಿನ ಸುಮಾರು ೦.೨೦ ಪ್ರತಿಶತ ದ್ರಾವಣದ ಸಿಂಪರಣೆ ಮಾಡಬೇಕು.

ಮ್ಯಾಂಗನೀಸ್:- ಮ್ಯಾಂಗನೀಸ್ ಕೊರತೆಯಲ್ಲಿ ಲಕ್ಷಣಗಳು ಕೆಳಭಾಗದ ಎಲೆಗಳಲ್ಲಿ ಕಂಡುಬರುವುದು. ಎಲೆಗಳ ಮೇಲೆರುವ ಹಳದಿ ಕೋಶಗಳಲ್ಲಿ ಹಸಿರು ನರಗಳು ಕಂಡುಬರುತ್ತವೆ. ಮ್ಯಾಂಗನೀಸ್ ಕೊರತೆ ಕಂಡುಬರುವ ಎಲೆಗಳಲ್ಲಿ ಯಾವುದೇ ರೀತಿಯ ಮಾಲ್ರರೇಶನ್ ಕಂಡುಬರುವುದಿಲ್ಲ. ಮ್ಯಾಂಗನೀಸ್ ಕೊರತೆಯ ಲಕ್ಷಣಗಳು ಪ್ರಾಥಮಿಕ ಹಾಗೂ  ಅಪ್ರಧಾನ ಹಾಗೂ ಎರಡನೆಯ ನಾಡಿ ನರಗಳ ಮಧ್ಯದಲ್ಲಿ ಕಂಡುಬರುತ್ತದೆ.

ಮ್ಯಾಂಗನೀಸ್ ಕೊರತೆಯನ್ನು ಸರಿದೂಗಿಸಲು ಮ್ಯಾಂಗನೀಸ್ ಸಲ್ಫೇಟನ ೦.೨ ಪ್ರತಿಶತ ದ್ರಾವಣದ ಸಿಂಪರಣೆ ಮಾಡಬೇಕು ಮ್ಯಾಂಗನೀಸ್ ಸಲ್ಫೇಟನ್ನು (ಪ್ರತಿ ಹೆಕ್ಟೇರಿಗೆ ೨೦ ರಿಂದ ೨೫ ಕಿ.ಗ್ರಾಂ./ಪ್ರತಿ ವರ್ಷಕ್ಕೆ) ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಅಥವಾ ಸೆಗಣಿಯ ರಾಡಿಯಲ್ಲಿ ನೆನೆಸಿ ಹನಿ ನೀರಾವರಿಯ ಡ್ರಿಪ್ಪರಗಳ ಕೆಳಗೆ ಹಾಕುವುದರಿಂದ ಮ್ಯಾಂಗನೀಸ್ ಸರಬರಾಜನ್ನು ಸಮರ್ಪಕಗೊಳಿಸಹುದಾಗಿದೆ.

ಬೋರಾನ್:- ಬೋರಾನ್ ಕೊರತೆಯ ಸಂದರ್ಭಗಳಲ್ಲಿ ಬೆಳೆಯುತ್ತಿರುವ ಎಲೆಗಳು ಕುಗ್ಗುತ್ತವೆ. ಅಥವಾ ನೀರಿಗೆ ಬೀಳುತ್ತವೆ. ಹೊಸ ಇಂಟರನೋಡ್‌ಗಳು ಸ್ವಲ್ಪ ಬಾವು ಹೊಂದುತ್ತವೆ. ಬೋರಾನ್ ಕೊರತೆಯ ಹಣ್ಣು ಕಟ್ಟುವಿಕೆಯನ್ನು ಬಾಧಿಸುವುದು. ಹಣ್ಣುಗಳ ಮೇಲೆ ಕಂಡುಬರುವ ಲಕ್ಷಣಗಳಲ್ಲಿ “ಹೆನ್ ಅಂಡ್ ಚಿಕನ್” ಲಕ್ಷಣಗಳು ಅಥವಾ “ಪಂಪಕಿನ್ ಆಂಡ್ ಪಿಡಿಸ್ ಆರ್ಡರ” ಎಂದು ಕರೆಯುತ್ತಾರೆ.

ಬೋರಾನ್ ಕೊರತೆಯನ್ನು ಸರಿಪಡಿಸಲು ಬೋರಾನ್ ಲವಣದ ದ್ರಾವಣವನ್ನು (೦.೧ ರಿಂದ ೦.೨ ಪ್ರತಿಶತ) ಸಿಂಪರಣೆ ಮಾಡಬೇಕು. ಬಳ್ಳಿಯು ಹೂ ಬಿಡುವ ಎರಡು ವಾರ ಅವಧಿಗೆ ಮುಂಚಿತವಾಗಿ ಈ ಸಿಂಪರಣೆ ನೀಡಬೇಕು ಪ್ರತಿ ವರ್ಷಕ್ಕೆ ಹೆಕ್ಟೇರಿಗೆ ೫ ಕಿ.ಗ್ರಾಂ. ಬೋರಿಕ್ ಆಮ್ಲ ಬಳಕೆ ಮಾಡಬೇಕು.

ಮಾಲಿಬ್ಡಿನಂ: ಮಾಲಿಬ್ಡಿನಂ ಪ್ರಮುಖವಾಗಿ ಎರಡು ಪ್ರಮುಖ ಕಬ್ಬಿಣಗಳಾದ ನೈಟ್ರೋಜೆಸೀಸ್ ಹಾಗೂ ನೈಟ್ರೇಟ್ ರಿಡಕ್ವೇಸಗಳ ಅಂಗಭಾಗವಾಗಿದೆ. ನೈಟ್ರೇಟ್ ರಿಡಕ್ಪೀಸಗಳ ಅಂಗಭಾಗವಾಗಿದೆ. ನೈಟ್ರೇಟ್ ರಿಡಕ್ಟೀಸ್ ಕಣ್ವವು ನೈಟ್ರೇಟ್ ರೂಪದ ಸಾರಜನಕವನ್ನು ಅಮೋನಿಯಂ ರೂಪದ ಸಾರಜನಕಕ್ಕೆ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ. ಕರ್ನಾಟಕದ ದ್ರಾಕ್ಷಿ ತೋಟಗಳಲ್ಲಿ ಮಾಲಿಬ್ಡಿನಂ ಕೊರೆತೆಯು ಸಾಮಾನ್ಯವಾಗಿ ಕಂಡುಬರುವುದಿಲ್ಲ. ಕೊರತೆಯ ಪ್ರಮುಖ ಲಕ್ಷಣಗಳೆಂದರೆ ಎಲೆಗಳು ಹಳದಿಯಾಗುವುದು ಹಾಗೂ ಎಲೆಯ ಅಂಚುಗಳು ಕಮರುವುದು.

ಕ್ಲೋರಿನ್: ಕ್ಲೋರಿನ್ ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ಭಾಗವಹಿಸುವುದು. ಕ್ಲೋರಿನ್ ಇರುವುದರಿಂದ ಕೋಶದ ಅಸ್ಮಾಟಿಕ್ ಪ್ರೆಶರ್ ಹೆಚ್ಚುವುದಲ್ಲದೇ ಇದು ಪತ್ರರಂಧ್ರಗಳ ಮುಚ್ಚುವಿಕೆ ಹಾಗೂ  ಬೆಳೆಯುವಿಕೆ ಮೇಲೆ ಪ್ರಭಾವ ಬೀರುವುದು ಕ್ಲೋರಿನ್ ವಾತಾವರಣದಲ್ಲಿ ಸಿಗುವುದರಿಂದ ಇದರ ಕೊರತೆ ತುಂಬಾ ಹೆಚ್ಚಾಗಿ ಕಂಡುಬರುವುದು.

ವಿಶೇಷ ಸೂಚನೆ: ಕೊಯ್ಲಿನ ೩೦ ರಿಂದ ೪೦ ದಿವಸಗಳ ಪೂರ್ವದಲ್ಲಿ ಯಾವುದೇ ರಾಸಾಯನಿಕ ಸಿಂಪರಣೆಯನ್ನು ಕೈಗೊಳ್ಳಬಾರದು. ಹಣ್ಣಿನ ಗೊಂಚಲನ್ನು ಕೊಯಿಲಿನ ೪ ರಿಂದ ೫ ದಿವಸಗಳ ಪೂರ್ವದಲ್ಲಿ ಎಲೆಗಳನ್ನು ಕತ್ತರಿಸಿ ಬಿಸಿಲಿಗೆ ಒಡ್ಡುವುದು. ಜನವರಿ ಹಾಗೂ ಫೆಬ್ರುವರಿ ಮಾಹೆಯಲ್ಲಿ ಬೇವಿನ ಹಿಂಡಿಯನ್ನು ವಾರ್ಷಿಕವಾಗಿ ಒಂದು ಬಾರಿ ಒಂದು ಟನ್ ಪ್ರತಿ ಎಕರೆಯಂತೆ ನೀಡಲಾಗುವುದು. ಮ್ಯುರೇಟ್ ಆಪ್ ಪೋಟ್ಯಾಶ್ ನಲ್ಲಿ ೫೦% ಇದ್ದು, ದ್ರಾಕ್ಷಿ ಬೆಳೆಗೆ ಉತ್ತಮವಲ್ಲ.

ಗೆದ್ದಲಿನ ನಿಯಂತ್ರಣಕ್ಕಾಗಿ ಮಣ್ಣಿಗೆ ಕ್ಲೋರೋಪೈರಿಪಾಸ್, ೩ ಎಂ.ಎಲ್.  + ಕಾರ್ಬನ್ ಡೈಜಿಮ್ ೨ ಗ್ರಾಂ. ನಂತೆ ಪ್ರತಿ ವರ್ಷ ಮಿಶ್ರಣ ಮಾಡಬೇಕು. ಕಳೆ ನಿಯಂತ್ರಣಕ್ಕಾಗಿ ಗ್ಲೈಪೋಸೆಟ್ ೧೦ ಎಂ.ಎಲ್. ಅಥವಾ ಪ್ಯಾರಾಕ್ಟಾಡ್ ಡೈಕ್ಲೋರೈಡ್ ೩ ರಿಂದ ೪ ಎಂ.ಎಲ್. ಅನ್ನು ಸಿಂಪರಿಸಬೇಕು.

ಚಿತ್ರ ಮತ್ತು ಮಾಹಿತಿ ಸಹಕಾರ: ಪಾಂಡುರಂಗ ಮತ್ತು ವಿಠ್ಠಲ್ ಮಂಗಿ, ತೋಟಗಾರಿಕಾ ಕಾಲೇಜು, ಬಾಗಲಕೋಟೆ