ದ್ವಂದ್ವ

Submitted by Harish Athreya on Fri, 02/13/2009 - 09:58
ಬರಹ

ಇದ್ದೇನೆ ,
ನನಗೋಸ್ಕರ
ಒಮ್ಮೊಮ್ಮೆ ಅದೂ ಅಲ್ಲ.
ಏಕಾಗಿ ಹೀಗೆ
ಬರೀ ಗೊಂದಲ?
ಅಲೆಮಾರಿ,
ಗೋವೆಯ ಹಿಪ್ಪಿಯಂತೆ.
ಬಟ್ಟೆ ಒಮ್ಮೆ ಉಂಟು
ಒಮ್ಮೆ ಇಲ್ಲ.
ಇದ್ದೂ ಇಲ್ಲದಂತೆ
ಛೆ! ನಾ ಹಿಪ್ಪಿಯಲ್ಲ.
ಆಕಳಿಕೆ,ತೂಕಡಿಕೆ
ಕಣ್ಬಿಟ್ಟರೆ
ಅದೇ ಪ್ರಪಂಚ,
ನಿತ್ಯ ಜಂಜಾಟ , ಬೇಸರಿಕೆ,
ಆದರೂ ಅದೇ ಬೇಕು.
ಬೆತ್ತಲೆಯಲ್ಲೂ ಸುಖವಿದೆ.
ಕೆಲವೊಮ್ಮೆ ಅಸಹ್ಯವಿದೆ.
ಬರೀ ದ್ವಂದ್ವ
ಖಚಿತ ಅಸಾಧ್ಯ.
ಸಾಯಲು ನಿಂತಿದ್ದೇನೆ
ತುದಿಬೆಟ್ಟದಲಿ
ಕೆಳಗೆ ಪ್ರಪಾತ
ಬದುಕು,ಅವಕಾಶ ಬೇಕು
ಅವಕಾಶವ ಹಿಡಿದೆ
ಪ್ರಪಾತದೊಳಗೆ

ಲೇಖನ ವರ್ಗ (Category)