ದ್ವಿದಳ ಧಾನ್ಯ ಉತ್ಪಾದನೆ: ಅಗ್ರಸ್ಥಾನದ ಗುರಿ ಸಾಧನೆಯಾಗಲಿ

ರಾಜ್ಯದಲ್ಲಿ ಈ ವರ್ಷ - ಗರಿಷ್ಟ ಗರಿಷ್ಠ ಪ್ರಮಾಣದಲ್ಲಿ ಪ್ರಮಾಣದಲ್ಲಿ ದ್ವಿದಳ ದ್ವಿದಳ ಧಾನ್ಯಗಳನ್ನು, ಅದರಲ್ಲೂ ವಿಶೇಷವಾಗಿ ತೊಗರಿಯನ್ನು ಬೆಳೆಯುವ ಮೂಲಕ ದೇಶದಲ್ಲಿ ದೇಶದಲ್ಲಿ ಆಗ್ರಸ್ಥಾನಕ್ಕೇರಲು ಗುರಿಯನ್ನು ಹಾಕಿಕೊಳ್ಳಲಾಗಿದೆ. ದೇಶದಲ್ಲಿ ಪ್ರಸ್ತುತ ಮಹಾರಾಷ್ಟ್ರವು ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಮುಂದಿದೆ. ಅದನ್ನು ಹಿಂದಿಕ್ಕಿ ಕರ್ನಾಟಕವನ್ನು ಮುಂಚೂಣಿಗೆ ತಂದುನಿಲ್ಲಿಸುವ ಸರಕಾರದ ಉದ್ದೇಶ ಶ್ಲಾಘನಾರ್ಹ. ಇದರಿಂದ ರಾಜ್ಯದ ರೈತರಿಗೆ ಪ್ರಯೋಜನವಾಗಲಿದ್ದು ರಾಜ್ಯದ ಹಿರಿಮೆಯೂ ಹೆಚ್ಚಲಿದೆ; ಜತೆಗೆ ಬೊಕ್ಕಸಕ್ಕೂ ಆದಾಯ ಹರಿದುಬರಲಿದೆ.
ತೊಗರಿ ಬೆಳೆಯ ವಿಸ್ತೀರ್ಣದಲ್ಲಿ ಕರ್ನಾಟಕವನ್ನು ದೇಶದಲ್ಲಿಯೇ ಮೊದಲಿ ಗನನ್ನಾಗಿ ಮಾಡುವ ಗುರಿಯನ್ನು ಸರಕಾರವು ಬಜೆಟ್ ನಲ್ಲಿಯೇ ಘೋಷಿಸಿದೆ. ಈ ವರ್ಷ ೩೬.೧೧ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ, ವಿಶೇಷವಾಗಿ ತೊಗರಿ ಯನ್ನು ಬಿತ್ತನೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ೨೧ ಲಕ್ಷ ಟನ್ ಇಳುವರಿ ಪಡೆಯುವ ಗುರಿ ಹೊಂದಲಾಗಿದೆ. ತೊಗರಿಯ ಜತೆಗೆ ಹೆಸರು, ಅಲಸಂಡೆ, ಉದ್ದು ಇತ್ಯಾದಿಗಳನ್ನು ಕೂಡ ಬೆಳೆಸುವ ಉದ್ದೇಶ ಹಾಕಿಕೊಳ್ಳಲಾಗಿದೆ. ದ್ವಿದಳ ಧಾನ್ಯ ಉತ್ಪಾದನೆಯನ್ನು ಹೆಚ್ಚಿಸುವುದಕ್ಕಾಗಿ ರೈತರಿಗೆ ಪ್ರೋತ್ಸಾಹ ಧನ ನೀಡುವುದರ ಸಹಿತ ವಿವಿಧ ಉತ್ತೇಜನ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ.
ಪ್ರಸ್ತುತ ದ್ವಿದಳ ಧಾನ್ಯ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ಕಳೆದ ವರ್ಷ ಅದು ೨೦ ಲಕ್ಷ ಟನ್ ದ್ವಿದಳ ಧಾನ್ಯ ಉತ್ಪಾದಿಸಿತ್ತು. ಕರ್ನಾಟಕದಲ್ಲಿ ೨೦೨೩-೨೪ರಲ್ಲಿ ೧೩ ಲಕ್ಷ ಟನ್ ಮತ್ತು ೨೦೨೪-೨೫ರಲ್ಲಿ ೧೬ ಲಕ್ಷ ಟನ್ ಗುರಿ ಸಾಧಿಸಲಾಗಿತ್ತು. ಈ ಬಾರಿ ದ್ವಿದಳ ಧಾನ್ಯ ಬೆಳೆಯುವ ಉದ್ದೇಶ ಹೊಂದಿ ೭-೮ ಲಕ್ಷ ರೈತರು ಬೆಳೆ ಸಮೀಕ್ಷೆಯಡಿ ನೋಂದಣಿ ಮಾಡಿಸಿಕೊಳ್ಳಬಹುದು ಎಂಬ ಅಂದಾಜನ್ನು ಸರಕಾರ ಹಾಕಿಕೊಂಡಿದೆ. ಬೆಳೆ ಸಮೀಕ್ಷೆಯಡಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರೋತ್ಸಾಹಧನ ನೀಡುವ ವಿಷಯದಲ್ಲಿ ಸರಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ರಾಜ್ಯದ ಕಲಬುರಗಿ, ವಿಜಯಪುರ, ಬೀದರ್, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ದ್ವಿದಳ ಧಾನ್ಯಗಳನ್ನು ಪ್ರಧಾನವಾಗಿ ಬೆಳೆಯಲಾಗುತ್ತದೆ. ಈ ಜಿಲ್ಲೆಗಳಲ್ಲಿ ತೊಗರಿ ಮುಖ್ಯವಾಗಿದ್ದರೆ ಹೆಸರು, ಉದ್ದು ಅಲಸಂಡೆ ಇತ್ಯಾದಿಗಳನ್ನು ಈ ಜಿಲ್ಲೆಗಳು ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ತೊಗರಿ ಸರ್ವತ್ರ ಬಳಕೆಯಾಗುವ ಧಾನ್ಯವಾಗಿರುವುದರಿಂದ ಮಾರುಕಟ್ಟೆಯೂ ಚೆನ್ನಾಗಿರುತ್ತದೆ. ಈ ಹಿನ್ನೆಲೆಯಲ್ಲಿ ತೊಗರಿ ಸೇರಿದಂತೆ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಳಕ್ಕೆ ಸರಕಾರ ಗುರಿ ಹಾಕಿಕೊಂಡಿರುವುದು ಉತ್ತಮ ನಿರ್ಧಾರವಾಗಿದೆ.
ಈ ಬಾರಿ ಮುಂಗಾರು ಅವಧಿಗೆ ಮುಂಚಿತವಾಗಿಯೇ ಆಗಮಿಸಿದ್ದು, ರಾಜ್ಯದಲ್ಲಿ ಕೃಷಿಗೆ ಪೂರಕ ವಾತಾವರಣವನ್ನು ಸೃಷ್ಟಿಸಿದೆ. 'ಭಾರತದಲ್ಲಿ ಕೃಷಿಯು ಮಳೆಯೊಡನೆ ಆಡುವ ಜೂಜು' ಎಂಬ ಮಾತಿದೆ. ಅನೇಕ ಬಾರಿ ಇದು ಕ್ಲೀಷೆ ಯಂತೆ ಕೇಳಿಸಿದರೂ ನಮ್ಮ ಮಟ್ಟಿಗೆ ಇದು ಸಾರ್ವಕಾಲಿಕ ಸತ್ಯ. ಮುಂಗಾರು ಮಳೆ ಚೆನ್ನಾಗಿ ಆಗುತ್ತಿರುವುದು ದ್ವಿದಳ ಧಾನ್ಯ ಉತ್ಪಾದನೆಯ ಗುರಿ ಸಾಧನೆಗೆ ಪೂರಕವಾಗಿದೆ. ಸರಕಾರ ಮತ್ತು ರೈತರು ಈ ಪರಿಸ್ಥಿತಿಯ ಪ್ರಯೋಜನವನ್ನು ಪಡೆದುಕೊಂಡರೆ ಗುರಿ ಸಾಧನೆಯಾಗುವುದರಲ್ಲಿ ಸಂಶಯವಿಲ್ಲ.
ಪ್ರಸ್ತುತ ಕೃಷಿ ಇಲಾಖೆ ಮತ್ತು ಸರಕಾರ ದ್ವಿದಳ ಧಾನ್ಯಗಳನ್ನು ಬೆಳೆಯಲಿರುವ ರೈತರಿಗೆ ರಸಗೊಬ್ಬರ, ಕೀಟನಾಶಕಗಳು ಇತ್ಯಾದಿ ಕೃಸ್ತ ಕಾಲದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಅಷ್ಟು ಮಾತ್ರವಲ್ಲ ಮುಂದೆ ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಕನಿಷ್ಠ ಬೆಂಬಲ ಬೆಲೆಯೂ ಲಭ್ಯವಾಗುವತ್ತ ಗಮನಹರಿಸಬೇಕು. ಉತ್ಪಾದನೆ ಹೆಚ್ಚಿದಂತೆ ಬೆಲೆ ಕುಸಿಯುವ ಸಾಧ್ಯತೆ ಇರುತ್ತದೆ, ಮಧ್ಯವರ್ತಿಗಳು, ಕಾಳಸಂತೆಕೋರರ ಉಪಟಳವೂ ತಪ್ಪಿದ್ದಲ್ಲ. ಈ ನಿಟ್ಟಿನಲ್ಲಿ ಪರಿಹಾರ ಕ್ರಮಗಳತ್ತ ಈಗಲೇ ದೂರದೃಷ್ಟಿ ಇರಿಸಿಕೊಂಡು ಕಾರ್ಯಯೋಜನೆ ರೂಪಿಸಿಕೊಂಡು ಮುಂದುವರಿಯಬೇಕಿದೆ. ಆಗ ಗುರಿ ಸಾಧನೆಯ ಜತೆಗೆ ರೈತರ ಹಿತವನ್ನೂ ಕಾಪಾಡಲು ಸಾಧ್ಯವಾಗುತ್ತದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೧-೦೭-೨೦೨೫
ಚಿತ್ರ ಕೃಪೆ : ಅಂತರ್ಜಾಲ ತಾಣ