ದ್ವೈತ ಸಿದ್ಧಾಂತ ಪ್ರತಿಪಾದಕ
ಕವನ
ಮಧ್ಯಗೇಹ ಭಟ್ಟರು ವೇದಾವತಿ ದಂಪತಿಗಳ ಕುಮಾರ
ಬಾಲ್ಯದ ನಾಮಧೇಯ ವಾಸುದೇವ
ಎಳವೆಯಲಿ ಅಭ್ಯಸಿಸಿದರು ವೇದಗಳ ಸಾರ
ಸನ್ಯಾಸ ದೀಕ್ಷೆಯನು ಪಡೆದ ಧೀರ
ದ್ವೈತ ಸಿದ್ಧಾಂತ ಪ್ರತಿಪಾದಕ ಸಾರಿದೆ
ಅಣುಅಣುವು ದೇವರ ಸಾಕ್ಷಾತ್ಕಾರ ಎಂದೆ
ಮೂಲ ಭಗವಂತನ ರೂಪ ಶ್ರೀಕೃಷ್ಣನ ಭಜಿಸಿದೆ
ಸುಭಾಷಿತಗಳ ಸಾರ ಸಂಗ್ರಹ ರಚಿಸಿದೆ
ತ್ರೇತಾಯುಗದ ಹನುಮಂತನ ಧೀರೋದತ್ತ ಗುಣ
ದ್ವಾಪರದ ಭೀಮಸೇನನ ಬಲಾಢ್ಯತನ
ಬುದ್ಧಿವಂತಿಕೆ ಜಾಣ್ಮೆಗಳ ಸಂಗಮದ ಯತಿಯೆನಿಸಿ
ಮೂವತ್ತೇಳು ಗ್ರಂಥಗಳ ರಚನೆಯ ಕಿರೀಟಿ
ಗೋಪಿ ಚಂದನದಲ್ಲಿ ಸಾಲಿಗ್ರಾಮ ಶಿಲೆ ಗೋಚರ
ದ್ವಾದಶ ಸ್ತೋತ್ರಗಳ ಪಠಿಸಿ ಮಧ್ವ ಸರೋವರದಿ ಪ್ರತಿಷ್ಠಾಪನೆ
ಅಷ್ಟಮಠಗಳ ಯತಿವರ್ಯರಿಂದ ಪೂಜೆ ಪರಂಪರೆ
ತರ್ಕಕ್ಕೆ ಸಿಗದ ಆತ್ಮ ಪರಾಶಕ್ತಿಯ ತೋರಿಸಿದೆ
ಅನುಭವವೇ ಜೀವನದ ಮೊದಲ ಪಾಠವೆಂದೆ
ಮಹಾ ಜ್ಞಾನಿಗಳ ಮಾತುಗಳಲಿ ನಂಬಿಕೆಯಿದೆಯೆಂದೆ
ನಿರಾಳ ಮನದಿಂದ ಭಗವಂತನ ಸೇವಿಸು
ಶ್ರದ್ಧಾಭಕ್ತಿಗಳೇ ಅನುಪಮ ಸಾಧನವೆಂದೆ
-ರತ್ನಾ ಕೆ.ಭಟ್ ತಲಂಜೇರಿ
(೧೦-೦೨-೨೦೨೨ ರಂದು ಮಧ್ವನವಮಿ)
ಚಿತ್ರ್