ಧರೆಗುರುಳಿದ ವಿಜ್ಞಾನ ತಾರೆ!
ಬರಹ
ಶ್ರೀಜಿ.ಟಿ.ನಾರಾಯಣರಾವ್ ಅವರು ಇಂದು ಬೆಳಿಗ್ಗೆ (೨೭.೦೬.೦೮) ಸುಮಾರು ೭.೦೦ ಗಂಟೆಗೆ ತಮ್ಮ ಮೈಸೂರಿನ ನಿವಾಸದಲ್ಲಿ ತಮ್ಮ ಕನ್ನಡ ವಿಜ್ಞಾನ ಕೈಂಕರ್ಯ ಋಣವನ್ನು ತೀರಿಸಿ ಮುಕ್ತರಾದರು.
ವಿಜ್ಞಾನ ಸಾಹಿತ್ಯವನ್ನು ಕನ್ನಡದಲ್ಲಿ ಜನಪ್ರಿಯಗೊಳಿಸಿದವರು. ಇಂದು ಕನ್ನಡದಲ್ಲಿ ವಿಜ್ಞಾನ ಕೃಷಿಯನ್ನು ಮಾಡುತ್ತಿರುವ ಎಲ್ಲರಿಗೂ ಗುರುಸ್ವರೂಪಿಗಳಾಗಿದ್ದರು.
ವಿಜ್ಞಾನ ಮತ್ತು ಮೂಡನಂಬಿಕೆಗಳ ಬಗ್ಗೆ ಜನಜಾಗೃತಿಯನ್ನು ಮೂಡಿಸಲು ಶ್ರಮಿಸಿದ್ದರು. ಪ್ರತಿ ಸಂಕ್ರಾಂತಿಗೂ ಇವರ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಈ ಬಗ್ಗೆ ಒಂದು ಉತ್ತಮ ಪುಸ್ತಕವನ್ನೂ ಬರೆದಿರುವರು.
ವಿಜ್ಞಾನದ ಜೊತೆಗೆ ಸಾಹಿತ್ಯದಲ್ಲೂ ಅಪಾರ ಆಸಕ್ಥಿಯನ್ನು ಹೊಂದಿದ್ದರು. `ಅತ್ರಿಸೂನು` ಎಂಬ ಹೆಸರಿನಲ್ಲಿ ಕವನಗಳನ್ನು ಬರೆಯುತ್ತಿದ್ದರು. ವಿಶ್ವಕೋಶ ವಿಜ್ಞಾನ ವಿಭಾಗದ ಸಂಪಾದಕರಾಗಿದ್ದರು. ಮುಗಿಯದ ಹಾದಿ ಎಂಬ ಆತ್ಮಕಥನವನ್ನು ಬರೆದಿದ್ದರು. ಕಳೆದ ವರ್ಷ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಬಂದಿತ್ತು.
ಅವರ ಆತ್ಮಕ್ಕೆ ಶಾಂತಿ ದೊರೆಯಲಿ.