ಧರ್ಮಕಾರಣ
ಬರಹ
ನನ್ನ ಪ್ರೀತಿಸಲು
ಇಲ್ಲಾ ದ್ವೇಷಿಸಲು
ಗುರುತಿಸಲು ಇಲ್ಲಾ
ಗುರುತಿಸದಿರಲು
ಬೆನ್ನು ತಟ್ಟಲು ಇಲ್ಲ
ಅದಕೆ ಚೂರಿ ಇಡಲು
ನನ್ನ ಒಪ್ಪಲು
ಇಲ್ಲಾ ಹೊರತಬ್ಬಲು
ಕೊನೆಗೆ ಬದುಕಲು
ಇಲ್ಲಾ ಸಾಯಲು
ದಯೆತೋರಿ ಒಂದು
ಅವಕಾಶ ನೀಡಿ
ಕೂಗುವೆನು ಎಲ್ಲರನು ಮನುಕುಲಕೆ
ಜಾತಿ ಮತಬೇಧವಿರದೆಡೆಗೆ
ರಾಗ ದ್ವೇಷಗಲಿಲ್ಲದೆಡೆಗೆ
ಪ್ರೀತಿಯಸಾಗರದೆಡೆಗೆ