ಧರ್ಮಸ್ಥಳ ಪರಮಜ್ಯೋತಿ

ಧರ್ಮಸ್ಥಳ ಪರಮಜ್ಯೋತಿ

ಕವನ

ಧರ್ಮದಾತ ಮಂಜುನಾಥ ನಮೋ ನಮೋ

ಧರ್ಮಸ್ಥಳ ಪರಮಜ್ಯೋತಿ ನಮೋ ನಮೋ ||ಪ ||

 

ಅನ್ನದಾತ ವಿದ್ಯಾದಾತ ಜ್ಞಾನ ದಾತಾನೆ 

ತ್ರಿಲೋಕನಾಥ ಮಹಾಶಕ್ತಿ ಮಹಾಮಹಿಮನೆ |

ಒಂದೇ ಒಂದು ಆಸೆ ಇಹುದು ರುದ್ರಾಕ್ಷನೆ  

ಹೊನ್ನ ಮಣ್ಣ ಕೇಳಲಾರೆ ಲೋಕಪಾಲನೆ  ||

 

ನಿನ್ನನೊಮ್ಮೆ ಕಾಣೋ ಆಸೆ ದಾನ ದೀಪನೆ

ಜೀವನದಿ ಒಂದೊಮ್ಮೆ ಬಂದು ಬಿಡು ದಯೆತೋರಿ |

ಧರ್ಮಸ್ಥಳ ಕ್ಷೇತ್ರದಲ್ಲಿ ನೆಲೆಸಿಹ ದೇವಾ 

ಕಾಪಾಡು ಕರುಣಾಳು ತ್ರಿ ನೇತ್ರನೆ ||

 

ನೇತ್ರವತಿ ನದಿಯಲ್ಲಿ ಮಿಂದು

ವಿಧ ವಿಧ ಪೂಜೆಯ ಗೆಯ್ಯುತಿಹರು |

ದರುಶನ ನೀಡೋ ಕರುಣಾ ನಿಧಿ

ಭಕ್ತ ವತ್ಸಲಾ ಹೇ ಪ್ರಭು ಶಂಕರ ||

 

-ಸುಭಾಷಿಣಿ ಚಂದ್ರ, ಕಾಸರಗೋಡು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್