ಧೀರ‌ ನೀನು ಅಮರನು

ಧೀರ‌ ನೀನು ಅಮರನು

ಕವನ

ಮರೆಯಲಾರೆ  ನಿನ್ನ ಕೀರ್ತಿ ಧೀರ ನೀನು ಅಮರನು     
 ಸಾಹಸದ ರಕ್ತ ಹರಿಸಿ ರಾಷ್ಟ್ರ ಕಾಯ್ವ ಯೋಧನೂ 
ಸಶಸ್ತ್ರ ಹಿಡಿದು ನುಗ್ಗುತ ಶತ್ರು ಎದೆಯ ಸೀಳಿರಿ 
ನಿಮ್ಮ ಹರಸಿ ಕಾಯುತಿಹಳು ನಮ್ಮ ತಾಯಿ ಭಾರತಿ 
 
 
ನಿನ್ನ  ಧೀರ ಹೆಜ್ಜೆ ಶೌರ್ಯ ಅದುವೇ ನಮಗೆ ಸ್ಫೂರ್ತಿಯು
ಜಾತಿ ಧರ್ಮ ಮೇಲು ಕೀಳು ಮೀರಿ ಬೆಳೆದ ಯೋಧರು  
 ಶತ್ರು ಎದೆಯ ಸೀಳಿದವಗೆ ಸಾಕ್ಷಿ ಕೇಳ್ವ ಗಣ್ಯರು  
ನಿಸ್ವಾರ್ಥಿ ನೀನು ತ್ಯಾಗಮೂರ್ತಿ  ಭಾರತಾಂಬೆ ಬಲ್ಲಳು 
ಸಶಸ್ತ್ರ ಹಿಡಿದು ನುಗ್ಗುತ ಶತ್ರು ಎದೆಯ ಸೀಳಿರಿ 
ನಿಮ್ಮ ಹರಸಿ ಕಾಯುತಿಹಳು ನಮ್ಮ ತಾಯಿ ಭಾರತಿ 
 
 
ಸಿಡಿಲು ಬಡೆದ ಬಂಡೆಯಂತೆ ಅಲುಗಾಡದ  ದೇಹವು 
ಶತ್ರುದೇಶದೊಳಗೆ ನುಗ್ಗಿ ದಮನ ಮಾಡೋ ಕ್ಷಾತ್ರವು 
ನೆರೆಯುಬರಲಿ  ಪ್ರಳಯವಿರಲಿ ಜೀವಪೊರೆವ  ರಕ್ಷಕನು 
ಮೋಸಕಪಟ ಜಾಲದಲ್ಲಿ ನಿನ್ನ ಕೊಲುವ  ಧೂರ್ತರು
ಸಶಸ್ತ್ರ ಹಿಡಿದು ನುಗ್ಗುತ ಶತ್ರು ಎದೆಯ ಸೀಳಿರಿ 
ನಿಮ್ಮ ಹರಸಿ ಕಾಯುತಿಹಳು ನಮ್ಮ ತಾಯಿ ಭಾರತಿ 
 
 
 
ರಾಷ್ಟ್ರ ಕಾಯ್ವ ಧೀರ ನಿನಗೆ ವೀರ ಸ್ವರ್ಗ ನಿಷ್ಚಿತ 
ಅಂಜದೆದೆಯ ಮುಂದೆನಿಂತ ಶತ್ರುವು  ಪಾರಾಜಿತ 
ಪರಿವಾರದ ಪರಿವಿಲ್ಲದೆ ರಾಷ್ಟ್ರ ಹಿತಕೆ ಧಾವಿಸುವೆ
ನಿನ್ನ ಪಡೆದ  ದೇಶದೊಡತಿ ಭಾರತಾಂಬೆ ಧನ್ಯಳು
ಸಶಸ್ತ್ರ ಹಿಡಿದು ನುಗ್ಗುತ ಶತ್ರು ಎದೆಯ ಸೀಳಿರಿ 
ನಿಮ್ಮ ಹರಸಿ ಕಾಯುತಿಹಳು ನಮ್ಮ ತಾಯಿ ಭಾರತಿ 

p.p1 {margin: 0.0px 0.0px 0.0px 0.0px; font: 12.0px 'Helvetica Neue'; -webkit-text-stroke: #000000}
p.p2 {margin: 0.0px 0.0px 0.0px 0.0px; font: 12.0px 'Helvetica Neue'; -webkit-text-stroke: #000000; min-height: 14.0px}
span.s1 {font-kerning: none}
span.Apple-tab-span {white-space:pre}

Comments