ಧೂಮಪಾನ ನಿಷೇಧ

ಧೂಮಪಾನ ನಿಷೇಧ

ಬರಹ

ಕೇಂದ್ರ ಸರಕಾರವೇನೋ ಇವತ್ತಿನಿಂದ ಸಾರ್ವಜನಿಕ ಸ್ಥಳಗಳಾಲ್ಲಿ ಧೂಮಪಾನ ನಿಷೇಧವನ್ನು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ ಪ್ರಯುಕ್ತ ಜಾರಿಗೆ ತಂದಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸನ್ನು ಪಡಿಯುತ್ತೇ ಕಾದು ನೋಡಬೇಕು. ಧೂಮಪಾನ ಪ್ರಿಯರಿಗೆ ಶಾಪವಾದರೂ ಈ ಧೂಮಪಾನದ ಕಾಟದಿಂದ ಮುಕ್ತಿ ಪಡೆದವರ ಸಂಖ್ಯೆ ಅಧಿಕ. ಬರೀ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ನಿಷೇಧ ಏರುವುದರ ಬದಲು ಬೀಡಿ, ಸಿಗರೇಟ್ ನ್ನು ಸಂಪೂರ್ಣ ನಿಷೇಧ ಮಾಡಿದರೆ ಒಳ್ಳೆಯದಲ್ಲವೇ, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಈ ನಿಷೇಧ ಜಾರಿಯಾಗುವುದು ಕಷ್ಟ. ಏಕೆಂದರೆ ನಮ್ಮ ಜನಸಂಖ್ಯೆಗೆ ಈ ಪೋಲೀಸ್ ಸಂಖ್ಯೆ ಸಾಕಾಗುವುದಿಲ್ಲ. ಅವರು ಅಪರಾಧ ತಡೆಯುವ ಬದಲು ಧೂಮಪಾನ ಮಾಡುವರೇ ಎಂದು ಕಾದು ಕುಳಿತುಕೊಳ್ಳಬೇಕಾಗಬಹುದೇನೋ. ಒಟ್ಟಿನಲ್ಲಿ ಧೂಮಪಾನ ನಿಷೇಧ ಸಮರ್ಥವಾಗಿ ಜಾರಿಗೆ ಬರಲಿ ಎಂಬುದು ನನ್ನ ಆಶಯ. ಗಾಂಧೀಜೀಯವರ ನೆನೆಪಿನ ಈ ಕಾರ್ಯಕ್ಕೆ ಯಶಸ್ಸು ದೊರೆಯಲಿ.
ಇಂತಿ ನಿಮ್ಮವ.
ಮಾಕೃಮ*

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet