ಧೂಮಪಾನ ಬಿಡಿ ಯೋಚನೆ ಮಾಡ್ಕೊಂಡು!

Submitted by krishnahr25 on Sat, 08/08/2015 - 20:53
ಬರಹ

ಧೂಮಪಾನ ಮಾಡೋನು ಅನ್ಕೊತಾನೆ ನಾನೆ ಕಿಂಗು,
ಅವನಿಗೆ ಗೊತ್ತಿಲ್ಲ ಅದರಿಂದ ಏನ್ ಆಗುತ್ತೆ ಎಂದು,
ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತ ಮೆಸಜ್ ನೋಡ್ಕೊಂಡು,
ಧೂಮಪಾನ ಬಿಡಿ ಯೋಚನೆ ಮಾಡ್ಕೊಂಡು,

ಧೂಮಪಾನದಿಂದ ಆಗುತ್ತೆ  ಆರೋಗ್ಯಕ್ಕೆ ಕುಂದು,
ಜನ ಹೇಳ್ತಾರೆ ಇದ್ರಿಂದ ಎನೂ ಉಪಯೋಗ ಇಲ್ಲ ಎಂದು,
ಇಗಲಾದ್ರು ಫ್ಯಾಮಿಲಿ ಮುಖಾ ನೋಡ್ಕೊಂಡು,
ಧೂಮಪಾನ ಬಿಡಿ ಯೋಚನೆ ಮಾಡ್ಕೊಂಡು,

ಕೇರ್ಲೆಸ್ ಆಗಿ ಎಸೆದ ಧೂಮಪಾನದ ತುಂಡು,
ಅದರಿಂದ ಆಗುತ್ತೆ ಪರಿಸರ ಬೆಂಡು,
ಇದ್ರಿಂದ ನಮಗೆ ಎನೂ ಉಪಯೋಗ ಇಲ್ಲ ಎಂದು,
ಧೂಮಪಾನ ಬಿಡಿ ಯೋಚನೆ ಮಾಡ್ಕೊಂಡು,