ಧೈರ್ಯ ಇದ್ದರೆ ಸಾಧನೆ
ಕವನ
ಧೈರ್ಯ ಇದ್ದರೆ ಸಾಧನೆ
ಧೈರ್ಯ ಸೋತರೆ ವೇದನೆ
ಗೆದ್ದರೆ ನಿನಗೆ ಸನ್ಮಾನ
ಸೋತರೆ ನಿನಗೇ ಅವಮಾನ
ಗೆದ್ದಾಗ ಹೊರಗಿನವರು
ಕೂಡ ನಮ್ಮ ಹುಡುಗ ಅಂತಾರೆ
ಸೋತಾಗ ಸಂಬಂಧಿಕರು
ಕೂಡ ಪರಿಚಯಸ್ಥ ಅಂತಾರೆ
ತಿಳಿದುಕೊಂಡರೆ ಸಾಲದು
ಚಿಂತಿಸಿ ಸುತ್ತಾಡಿದರು ಸಾಲದು
ಕೈಲಾದಷ್ಟು ನೀ ದುಡಿದು
ಹಿಡಿಯಷ್ಟು ಸುಖ ಬರುವುದು
ಬರುವವರಿಗೆ ಸ್ವಾಗತ ಮಾಡು
ಹೊಗುವವರಿಗೆ ಟಾಟಾ ಮಾಡು
ಬಂದರೆ ನಮ್ಮವರು
ಹೊದರೆ ಕಂಡವರು
ದಾರಿಯಲ್ಲಿ ಮುಳ್ಳು ಇರುತ್ತೆ
ಮುಳ್ಳಿನಲ್ಲಿ ದಾರಿ ಇರುವುದಿಲ್ಲ
ನೋವಿನಿಂದ ಅನುಭವ ಬರುತ್ತದೆ
ಅನುಭವದಿಂದ ನೋವು ಬರುವುದಿಲ್ಲ .
-ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಶಿಕ್ಷಕರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
