ಧೈರ್ಯ vs ಬುದ್ಧಿವಂತಿಕೆ

ಧೈರ್ಯ vs ಬುದ್ಧಿವಂತಿಕೆ

ಬರಹ

ಹಾಗೆ ಬರೆದ ಒಂದು ಕಥೆ...

2007 ಮಾರ್ಚ್, ಯಾವುದೋ ಒಂದು ಜಲಪಾತ
ಆ ಜಲಪಾತದ ಭೋರ್ಗೋರೆಯೋ ಸದ್ಡನ್ನು ಮೀರೋ ಹಾಗೆ ಅವ್ಳು ಹೆಳಿದ್ದು ನೆನಪು...
"ಲೊ! ಈ ಜಲಪಾತದ ಈ ಕಡೆ ಇಂದ ಆ ಕಡೆ ತನಕ ಹಗ್ಗ ಕಟ್ಟಿ ದಾಟೊದನ್ನ ಧೈರ್ಯ ಅಂತಾರೆ ..... ಆ ತರ್ಹ ಮಾಡದೇಇರೋದನ್ನ.. ಬುದ್ಧಿವಂತಿಕೆ ಅಂತಾರೆ"
"ಇದನ್ನ ಈಗ್ಯಾಕೇ ಹೆಳ್ತಿದ್ಯ?"
"ಅಲ್ಲಾ, ನಮ್ಮಪ್ಪನ್ನ ಎದುರು ಹಾಕಿಕೊಂಡು ನನ್ನ ಮದುವೆ ಆಗ್ತೀನಿ ಅಂತ ನೀಹೆಳಿದ್ಯಲ್ಲ ಅದು ನಿನ್ ಧೈರ್ಯ; ಆದ್ರೆಇನ್ನ್ಮುಂದೆ ಫ್ರೆಂಡ್ಸ್ ಆಗಿ ಇರೋಣಅಂದೆನಲ್ಲ ಅದು ನನ್ನ ಬುದ್ಧಿವಂತಿಕೆ :P"

"...."

ಆದ್ರೂ ಯಾಕೋ ತನ್ನ ಬುದ್ಧಿವಂತಿಕೆನ ಮೀರಿ ಅವ್ನ ಧೈರ್ಯಾನೆ ಇವ್ಳು ನಂಬಿದ್ಳು....

2008 ಮಾರ್ಚ್, ಯಾವುದೋ ಒಂದು ಜಲಪಾತ
ಇದಕ್ಕೆ ಮೂಕ ಸಾಕ್ಷಿಯಾಗಿದ್ರು ಆಲ್ಲಿ ತೇಲುತಿದ್ದ ಆ ಎರಡು ಹೆಣಗಳ್ನ ನೋಡ್ತಿದ್ದ ಜನ...