ನಕಾಶೆ ನೋಡುವುದರಲ್ಲಿ ನಾರಿಯರು ಹಿಂದೆ?
"ನಮ್ಮ ನಿತ್ಯಬಳಕೆಯ ಮ್ಯಾಪ್ಗಳನ್ನೆಲ್ಲ ರಚಿಸಿದವರಾರು? ಹೆಚ್ಚಾಗಿ ಗಂಡಸರೇ. ಸಿವಿಲ್ ಇಂಜನಿಯರಿಂಗ್, ಸರ್ವೆಯಿಂಗ್, ಬ್ಲೂಪ್ರಿಂಟಿಂಗ್ ಇವೆಲ್ಲ ಹೆಚ್ಚಾಗಿ ಗಂಡುಕ್ಷೇತ್ರಗಳೇ ತಾನೆ? ಇವತ್ತು ಚಾಲ್ತಿಯಿರುವ ಮ್ಯಾಪ್ಗಳೆಲ್ಲ ಗಂಡಸರು ರಚಿಸಿ ಗಂಡಸರು ಮಾರಾಟಮಾಡಿ ಗಂಡಸರು ಉಪಯೋಗಿಸುವಂಥವೇ ಇರೋದು ಎಂದರೂ ತಪ್ಪಲ್ಲ. ಒಂದುವೇಳೆ ಹೆಂಗಸರೇ ಮ್ಯಾಪ್ ರಚಿಸುತ್ತಿದ್ದರೆ? ಆಗ ಅದರಲ್ಲಿ ಚೌಕಗಳಜಾಲ ಮತ್ತು ಬಿಂದುಗಳ ಬದಲಿಗೆ ಲ್ಯಾಂಡ್ಮಾರ್ಕ್ಗಳ ಚಿತ್ರಗಳೇ ಇರುತ್ತಿದ್ದವು, ಸೀರೆಯಂಗಡಿ ಇರುವಲ್ಲಿ ಸೀರೆಯ ಚಿತ್ರ, ಬಾಟಾ ಸ್ಟೋರ್ ಇರುವಲ್ಲಿ ಪಾದರಕ್ಷೆಯ ಚಿತ್ರ... ಇತ್ಯಾದಿ. ಇನ್ನೊಬ್ಬ ಹೆಂಗಸು ಆ ಮ್ಯಾಪ್ಅನ್ನು ನೋಡಿದರೆ ಆಕೆಗದು ಕ್ಷಣಾರ್ಧದಲ್ಲಿ ಅರ್ಥವಾಗುತ್ತಿತ್ತು! ಅಂದಮೇಲೆ, ಭಾಗ್ಯದ ಬಳೆಗಾರನಿಗೆ ಮುತ್ತೈದೆ ಹೆಣ್ಣು ತವರುಮನೆಗೆ ಹೋಗಲು ಬಾಳೆ ಸೀಬೆ ಗಾಣ ಆಲೆಮನೆ ನವಿಲು ಸಾರಂಗ ಮುಂತಾಗಿ ಲ್ಯಾಂಡ್ಮಾರ್ಕ್ಗಳಿಂದಷ್ಟೇ ಡೈರೆಕ್ಷನ್ಸ್ ಕೊಟ್ಟ ಪರಿ ವೈಜ್ಞಾನಿಕವಾಗಿಯೂ ಸರಿಯಾಗಿಯೇ ಇದೆಯೆಂದಾಯಿತು!" ಎನ್ನುತ್ತಾರೆ ಶ್ರೀವತ್ಸ ಜೋಷಿ ತಮ್ಮ ಅಂಕಣ "ವಿಚಿತ್ರಾನ್ನ"ದಲ್ಲಿ. ಓದಿ: ನಕಾಶೆ ಮತ್ತು ನಾರಿಯರು