ನಖ ಶಿಖಾ0ತ‌

ನಖ ಶಿಖಾ0ತ‌

ಕವನ

 

 
ಮುಗಿಲು ಮಾಯೆಯಾಗಿ
ಮನದಾಳದ
ಬಾಳ ಹಂದರದಲಿ
ಚಿಗುರೊಡೆಸುವ
ಬಳ್ಳಿಯಾಗಿ
ಬಂದವಳು-
 
ಮೇಲ್ಮೈ ಜಾಣೆಯಾಗಿರದೇ
ಜಾಣರ-ಜಾಣೆಯಾಗಿ;
ರಾಗ-ರತಿಗೆ ಕನಸಿನ
ಹೊದ್ದಿಕೆ ಓರಣವಾಗಿಸಿ
ಕಾಮನ ಬಿಲ್ಲಿನ ನಡುವೆಯೂ
ಕಪ್ಪು-ಮೋಡಗಳನೂ 
ಆಮೋದದಿಂದ ಸಹಿಸುವ
ಸಹಿಷ್ಣೆಯಾಗಿ
 
ಬಾಳ-ತುಂಬ 
ತುಂಬಿಸಿದವಳು
 
ನಖ-ಶಿಖಾಂತ 
ನಖ-ಶಿಖಾಂತವಾದವಳು.
 -ಕೇಶವ ದೇಶಪಾಂಡೆ.