ನಗಬೇಡ ಕಲ್ಪವೃಕ್ಷೆ
ಸುಧೆಯ ಮಕ್ಕಳ ಹೊತ್ತ ಮೃದುಹೃದಯದವಳೆ
ಚದುರೆ ನಗುವೆಯದೇಕೆ ಬದಲುನುಡಿ ಬಾಲೆ
ಭುವಿಯೊಳಿದ್ದೆತ್ತರದ ಭವಿಯು ನೀನೆಂದೆ
ಸವಿಯಮೃತ ಸೋನೆಯನು ಕೊಡುವೆ ಜಗಕೆಂದೆ?
ಅಂಬರವೆ ಅಂಬರವು ನಿನಗೆ
ಸಂಭ್ರಮದಿ ಸರಿಯೆ ನಾ ನಿನಗೆ
ಸಪ್ಪೆ ನೀರನು ಸವಿದು ಸವಿ ಮಾಳ್ಪೆನೆಂದೆ
ಉಪ್ಪನಿತ್ತರು ತುಪ್ಪವೀಯುವವಳೆಂದೆ?
ಕೊಪ್ಪರಿಗೆ ಹಣವನ್ನು ಕಕ್ಕುವವಳೆಂದೆ
ಉಪ್ಪರಿಗೆ ಮನೆಯವನು ಬಯಸುತಿಹನೆಂದೆ?
ಒಪ್ಪುತಿದೆ ನಿನ್ನ ನಗೆ ಜಗಕೆ
ಬೆಪ್ಪುತನದೆನ್ನ ಸಮ್ಮುಖಕೆ
ಚಿರಕಾಲ ಜೀವಿಸುವ ವರವಿರುವುದೆಂದೆ
ತಿರೆಯಿಂದ ಏರಿ ಮೋಹವ ಕಳೆವಳೆಂದೆ
ದೇವಲೋಕದ ಹೆಸರ ಪದೆದಿರುವಳೆಂದೆ
ಭಾವಿಸಲು ಧ್ವಜ ನೀನು ಭೂದೇವಿಗೆಂದೆ?
ನಿನಗಿದೋ ಇಹುದೆನ್ನ ನಮನ
ಜನಕಾಗಿ ನಿನ್ನೀ ತನುಮನ
ಮುತ್ತಿನ ಕುಚ್ಚುಗಳ ಜಡೆ ಇರುವಳೆಂದೆ
ಮತ್ತೆ ಪಚ್ಚೆಯ ವ್ಯಜನ ಹಿದಿದಿರುವಳೆಂದೆ
ಸತ್ವದಾಹಾರವನು ಹೊಂದಿರುವಳೆಂದೆ
ನಿತ್ಯದೇವನ ಪದಕೆ ಅರ್ಪಿಸುವೆನೆಂದೆ
ಬಿಂಕವೇತಕೆಪೇಳು ಚಲುವೆ
ಕೊಂಕು ನೋಟವ ನೋಡುವೆ?
ಸೋತಿರುವೆ ನಾನಿನಗೆ ನಗಬೇಡ ನೋಡಿ
ಪ್ರೀತಿಯಿಂ ಕಲಿಸು ನಿನ್ನಭ್ಯುದಯ ಮೋಡಿ
ನಿನ್ನಂತೆ ಜಗಕೆ ಉಪಕಾರಿಯಂ ಮಾಡು
ನನ್ನ ಬಾಳನು ದಯದಿ ನೀ ಹಸನು ಮಾಡು
ಜಗದೊಳಗೆ ನೀನೆ ದಕ್ಷೆ
ನಗಬೇಡ ಕಲ್ಪವೃಕ್ಷೆ
ಹರಿದಾಸ ನೀವಣೆ ಗಣೇಶಭಟ್ಟ
ಕೋಡೂರು
Comments
ಉ: ನಗಬೇಡ ಕಲ್ಪವೃಕ್ಷೆ
In reply to ಉ: ನಗಬೇಡ ಕಲ್ಪವೃಕ್ಷೆ by raghumuliya
ಉ: ನಗಬೇಡ ಕಲ್ಪವೃಕ್ಷೆ
ಉ: ನಗಬೇಡ ಕಲ್ಪವೃಕ್ಷೆ
In reply to ಉ: ನಗಬೇಡ ಕಲ್ಪವೃಕ್ಷೆ by sada samartha
ಉ: ನಗಬೇಡ ಕಲ್ಪವೃಕ್ಷೆ
ಉ: ನಗಬೇಡ ಕಲ್ಪವೃಕ್ಷೆ
In reply to ಉ: ನಗಬೇಡ ಕಲ್ಪವೃಕ್ಷೆ by asuhegde
ಉ: ನಗಬೇಡ ಕಲ್ಪವೃಕ್ಷೆ