ನಗುವಿನ ಮುಖವಾಡ

ನಗುವಿನ ಮುಖವಾಡ

ಬರಹ

ಬಾಳಸಂತೆಯಲಿ ನಗುವಿನ ಮುಖವಾಡ ಹೊತ್ತ ಜನ ನಾವೆಲ್ಲ
ನಗು ಬಂದಾಗ ಅತ್ತು ಅಳು ಬಂದಾಗ ನಕ್ಕು
ಸಂತೆಯಲಿ ದಿಕ್ಕು ತಪ್ಪಿದ ಜನ ನಾವೆಲ್ಲ

ಹೃದಯ ಮಂದಿರದೊಳಗೆ ರಕ್ಕಸರನು ರಕ್ಷಿಸುವ ಜನ ನಾವೆಲ್ಲ
ಮನದ ಮನೆಯೊಳಗೆ ಪ್ರೀತಿಯೊಡಿಸಿ ದ್ವೇಷ ತುಂಬುವ ಜನ ನಾವೆಲ್ಲ
ಮೋಸವನೆ ಮೈಯೊಳಗಿಸಿ ಪಳಗಿದ ಜನ ನಾವೆಲ್ಲ
ಹಾವುಏಣಿ ಆಟದಲಿ ಮೇಲೆರುವವರಿಗೆ ಹಾವು ಕಚ್ಚಿಸುವ ಜನ ನಾವೆಲ್ಲ
ಭಯವನರಿಯದವರಿಗೆ ಭಯೊತ್ಪಾದನೆ ಕಲಿಸುವ ಜನ ನಾವೆಲ್ಲ
ಸ್ವಧರ್ಮ ಅರಿಯದ ನಾವು ಪರಧರ್ಮದಡಿಗೆ ಹೊಗುವ ಜನ ನಾವೆಲ್ಲ
ಪಾಪವನು ಕಳೆಯುವ ಗಂಗೆಯನು ಕಶ್ಮಲ ಗೊಳಿಸಿದ ಜನ ನಾವೆಲ್ಲ
ಕೊನೆಯಿರದ ಆಸೆಯ ಆಸೆಗೆ ಮಿಡಿಯುವ ಜನ ನಾವೆಲ್ಲ
ಎಂದು ಏನಾಗುವುದೆಂಬ ಪ್ರಶ್ನೆಯ ವ್ಯೋಹದೊಳಗಡೆ ಸಿಲುಕಿದ ಜನ ನಾವೆಲ್ಲ
ಉತ್ತರ ಸಿಗದ ಪ್ರಶ್ನೆಗಳ ಜೊತೆ ಕಾಣದ ದಾರಿಯಲಿ ಸಾಗುತಿರುವ ಜನ ನಾವೆಲ್ಲ
ಬಾಳಸಂತೆಯಲಿ ನಗುವಿನ ಮುಖವಾಡ ಹೊತ್ತ ಜನ ನಾವೆಲ್ಲ