ನಗುವಿರಲಿ ಜೀವನದಲಿ...

ನಗುವಿರಲಿ ಜೀವನದಲಿ...

ದಿನಾ ರಾತ್ರಿ ತಡವಾಗಿ ಬರುತ್ತಿದ್ದ ಗಂಡ ಹಾಗೂ ಹೆಂಡತಿಯ ಮಾತುಕತೆ

ಗಂಡ: ಲೇ.. ಇವ್ಳೇ,ಬಾಗಿಲು ತೆಗಿಯೇ.

ಪತ್ನಿ: ಚಿಲ್ಕ ಹಾಕಿಲ್ಲ, ಬನ್ರಿ.

ಗಂಡ: ಎಷ್ಟು ಸಲ ಹೇಳಿದ್ದೀನಿ. ಚಿಲ್ಕ ಹಾಕ್ದೆ ಮಲಗ್ಬೇಡ ಅಂಥ.

ಪತ್ನಿ: ಹೌದಾ? ನಾನು ಕೇಳಿಸ್ಕೊಂಡಿಲ್ಲ.(ಒಳಗ್ಬನ್ನಿ, ಮಾಡ್ತೀನಿ ಮಾರಿಹಬ್ಬ.)

ಗಂಡ ಬಾಗಿಲು ದೂಡಿದವ್ನೆ ದೊಪ್ಪನೆ ಉರುಳಿದ ಹಲಸಿನ ಕಾಯಿ ಬಿದ್ದ ಹಾಗೆ.

ಪತ್ನಿ: ಇನ್ನು ಒಂದಷ್ಟು ಕುಡಿಯಿರಿ, ಏನ್ರಿ,ಯಾಕಿಷ್ಟು ಲೇಟ್?

ಗಂಡ: ಹ್ಹಾಂ...ಹ್ಹೂಂ..ಅದೂ....ಅದೂ....ಕಾ...ಮಿ...ನಿ ಇದ್ಲು ಕಣೇ,ಬರೋಕೆ ಬಿಟ್ಟಿಲ್ಲ.

ಪತ್ನಿ: ಕಾಮಿನಿ ಯಾರ್ರೀ ಅವ್ಳು ನನ್ ಸವ್ ತಿ.

ಗಂಡ: ಅದೇ ಪಕ್ಕದ್ಮನೆ ಪಂಕಜ. ನಾನಿಟ್ಟ ಹೆಸ್ರು ಕಾಮಿನಿ.

ಪತ್ನಿ: ಮಾಡ್ತೀನಿ,ಇರಿ ನಿಮ್ಗೆ. ಕಾಮಿನಿ ಭೂತ ಬಿಡಿಸ್ತೀನಿ.

(ತಲೆಗೊಂದು ಕೊಡ ತಣ್ಣೀರು ಸುರಿದು ,ಅದೇ ಕೊಡವನ್ನು ತಲೆ ಮೇಲೆ ಕುಕ್ಕಿದ್ಳು.)

ಗಂಡ: ಅಯ್ಯಯ್ಯೋ, ನಾನೇನು ಮಾಡಿಲ್ಲ. ಅವ್ಳ ಗಂಡಂಗೆ ಆರೋಗ್ಯ ಸರಿ ಇಲ್ವಂತೆ, ಡ್ರಾಫ್ ಕೇಳಿದ್ಳು, ಕೊಟ್ಟೆ ಅಷ್ಟೇ.

ಪತ್ನಿ: ದಿನಾ ಯಾಕೆ ಲೇಟ್?

ಗಂಡ: ಅವ್ಳ ಗಂಡ ಕಂಪೆನಿ ಕೊಡ್ತಿದ್ದ.

ಪತ್ನಿ: ಮೊದ್ಲೇ ಹೇಳ್ಬಾರ್ದಿತ್ತಾ?

ಗಂಡ: ನೀನು  ಬಿಟ್ರೆ ತಾನೇ?

(ಪಾಪ! ಮಾಡಿದ ತಪ್ಪಿಗೆ ಆಸ್ಪತ್ರೆ ಭೇಟಿ, ಅಂದಿನಿಂದ ಕುಡಿತ ಬಂದ್)

-ರತ್ನಾ ಕೆ ಭಟ್