ನಗು ಮೂಡಿಬರಲಿ

ನಗು ಮೂಡಿಬರಲಿ

ಕವನ

ನಗುವೆಂ‌ಬ ಸಿರಿಯೊಂದು

ಮೊಗದಲ್ಲಿ ಅರಳಿರಲಿ

ಬಿಗುಮಾನ ಬದಿಗಿರಿಸಿ ನಗು ಮೂಡಿಬರಲಿ

 

ಚಿಗುರೆಲೆಯ ತಳಿರಂತೆ

ಮಿಗಿಲೆನಿಪ ಬೆಳೆಯಂತೆ

ಮಗುವಂತೆ ಮತ್ತೊಮ್ಮೆ ನಗು ಮೂಡಿಬರಲಿ

 

ಅವಸರದ ಬದುಕಿನಲಿ

ಬೆವರಿಳಿವ ದುಡಿಮೆಯಲಿ

ಅವನೆಲ್ಲ ಮರೆತೊಮ್ಮೆ ನಗು ಮೂಡಿಬರಲಿ

 

ಕಾಸಿದಕೆ ಖರ್ಚಿಲ್ಲ

ತಾಸಿದಕೆ ಬೇಕಿಲ್ಲ

ಕೂಸಂತೆ ಒಳಗಿಂದ ನಗು ಮೂಡಿಬರಲಿ

 

ಕುಪಿತರಾಗಲು ಬೇಡಿ

ಶಪಿಸಿ ತೆಗಳಲು ಬೇಡಿ

ಜಿಪುಣತನ ತೊರೆದೀಗ ನಗು ನೂಡಿಬರಲಿ

 

ಹಗಲಿರುಳ ಕಾಯಕದೆ

ದೊರಕಿರುವ ಯಶದಂತೆ

ಹಗುರಾಗಿ ಮನಸಾರೆ ನಗು ಮೂಡಿಬರಲಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

(ಚಿತ್ರ ಕೃಪೆ ಅಂತರ್ಜಾಲ) 

ಚಿತ್ರ್