ನಗು ಮೊಗದ ನಾಯಕ

ನಗು ಮೊಗದ ನಾಯಕ

ಕವನ

ದೇವ ಕೊಟ್ಟ ನಿನ್ನ ನಗುವ

ಹಂಚಿ ಹೋದೆ ಎಲ್ಲೆಡೆ

ಕೊನೆಗೆ ಬಿಟ್ಟು ನೀನು ಅಳುವ

ಉಳಿಸಿ ಹೋದೆ ನಮ್ಮೆಡೆ

 

ಗಾಢ ನಿದ್ರೆಯಲ್ಲಿ ಜಾರಿ

ಮಲಗಿದ್ದೆ ಕೆ ಸುಮ್ಮನೆ

ಕೂಗಿ ಅತ್ತ ರೂನು ಬಾರಿ

ಏಳದಾದೆ ಏಕೆ ಗಮ್ಮನೆ

 

ಬಿಟ್ಟು ಹೋಗುವಂತ ಕೆಲಸ

ಅಂತದೇನು ಉಳಿದಿತ್ತು

ಬೆಟ್ಟು ಮಾಡಿ ತಿಳಿಸಿದ್ರೆ ಅರಸ

ಕ್ಷಣದಲ್ಲೇನೇ ಮುಗಿತಿತ್ತು

 

ಅಪ್ಪಿಕೊಂಡು ಜನಕೆ ನೀನು

ಹಂಚಿ ಹೋದೆ ಪ್ರೀತಿಯ

ತಪ್ಪಿ ಕೂಡ ಜನರು ನಿನ್ನ

ಮರೆವು ದುಂಟೆ ನೀತಿಯ. 

(ಪುನೀತ್ ರಾಜಕುಮಾರ್ ಜನ್ಮದಿನದ ನೆನಪಿನಲ್ಲಿ)

-ಕೆ. ವಾಣಿ, ಚನ್ನರಾಯಪಟ್ಟಣ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್