ನಗೆಯು ಬರುತಿದೆ!ನಮಗೆ ನಗೆಯು ಬರುತಿದೆ !
ಬಹಳ ಹಿಂದೆ ನಾನು ಮಂಡ್ಯ ಜಿಲ್ಲೆಯ ಮದ್ದೂರ್ ತಾಲೂಕಿನ ಕೊಕ್ಕರೆ ಬೆಳ್ಳೂರಿಗೆ ಹೋದಾಗ ಸಿಕ್ಕ ಈ ಹೆಜ್ವಾರ್ಲೆಗಳು [ಪೆಲಿಕಾನ್] ನನ್ನನ್ನು ನೋಡಿ ನಗಲಾರಂಬಿಸಿದವು! ಹತ್ತಿರ ಹೋಗಿ ನೋಡಿದರೆ ಅವುಗಳ ಮಾತು ಕೇಳಿಬಂತು! ಒಂದು ಹೇಳ್ತು:- ನೋಡು "ಈಗ ತಾನೇ ತಮಾಷೆಗೆ ಹೇಳ್ತಿತಿದ್ಯಲ್ಲ ಮಾನವರು ತುಂಬಾ ಒಳ್ಳೆಯವರು ಎಂದು ! ಬಂದ ನೋಡು ನಮ್ ಫೋಟೋ ತೆಗದುಎಲ್ಲಕಡೆ ಹಂಚಿ ನಮ್ಮ ಜೀವನ ಹರಾಜು ಹಾಕಿ ಸಂತೋಷ ಪಡ್ತಾನೆ ನೋಡು" ಅಂತು!ನಂಗೆ ಯಾಕೋ ಸಿಟ್ಬಂದು ಅವನ್ನ ಕೇಳ್ದೆ!:- "ಅಲ್ಲ ನಾನು ನಿಮ್ಮ ಬಗ್ಗೆ ತಿಳ್ಕೊಂಡು ನಮ್ಮ ಜನರಿಗೆ ನಿಮ್ಮ ಬಗ್ಗೆ ತಿಳುವಳಿಕೆ ಕೊಡೋಣ ಅಂತ ಬಂದ್ರೆ ನೀವು ನನ್ನ ನೋಡಿ ನಗ್ತಿರ" ಅಂತ ಅಂದೆ.ಜೋರಾಗಿ ನಕ್ಕ ಅವು, ಹೇಳಿದವು:- "ಅಲ್ಲ ಕಣಯ್ಯ ನೀವು ಮಾನವರು ನಿಮ್ಮ ಕುಲವನ್ನೇ ನೆಟ್ಟಗೆ ಭೂಮಿಮೇಲೆ ಅರ್ತ ಮಾಡಿಕೊಳ್ಳದೆ ಕಚ್ಚಾಡಿ ಬಡಿದಾಡಿಕೊಂಡು ಇದೀರಿ.ನಿಮಗೆ ನಿಮ್ಮ ನಿಮ್ಮಲ್ಲೇ ಒಬ್ಬಬ್ಬರಿಗೂ ವೆತ್ಯಾಸ ಮಾಡಿಕೊಂಡು ಬದುಕುತ್ತ ಇದ್ದೀರಿ,ನಿಮ್ಮಲ್ಲಿ ಭೂಮಿಮೇಲೆ ಕಟ್ಟು ಪಾಡು ಮಾಡಿಕೊಂಡು ದೇಶ ದಿಂದ ದೇಶಕ್ಕೆ ಹೋಗಲು ವೀಸಾ ಕಾನೂನು ,ಮಾಡಿಕೊಂಡು ಮನುಷ್ಯ ಮನುಷ್ಯರಲ್ಲೇ ಭೇದ ಮಾಡಿಕೊಂಡು ಯುದ್ದ, ಬಾಂಬು, ಭಯೋತ್ಪಾದನೆ ,ಎಲ್ಲ ಮಾಡಿಕೊಂಡು ಸಮರಸದ ಜೀವನ ಸಾಗಿಸದೆ ನರಳಾಡ್ತಾ ಇದೀರಿ !.ಇನ್ನು ನಿಮಗೆ ನೀವು ಅರ್ಥ ಆಗಿಲ್ಲ,ಇನ್ನು ನೀವು ನಮ್ಮನ್ನು ಅರ್ಥ ಮಾಡ್ಕೊಳ್ಳೋದು ಏನಿದೆ ಹೇಳು ! ನಮ್ಮಲ್ಲಿ ಯಾರೂ ಯಾರ ಅನ್ನವನ್ನು ಖದಿಯೋಲ್ಲ , ಕ್ರೈಂ ಇಲ್ಲ, ರಾಜಕೀಯ ಇಲ್ವೆ ಇಲ್ಲ ,ಬೇರೆಯವರನ್ನು ದ್ವೇಷ ಮಾಡೋದಿಲ್ಲ.ಒಟ್ಟಿನಲ್ಲಿ ನಿಮ್ಮ ಅಂದರೆ ಮಾನವರ ಯಾವುದೇ ಬುದ್ದಿ ನಮಗೆ ಇಲ್ಲ.ನಮ್ಮಲ್ಲಿ ಯಾರು ಎಲ್ಲಿ ಹೋದ್ರು ವೀಸಾ ಕಾನೂನು ಇಲ್ಲ, ನಾವು ಸ್ವತಂತ್ರವಾಗಿ ಭೂಮಿಯಲ್ಲಿ ಎಲ್ಲರೊಡನೆ ಬೆರೆತು ಯಾರಿಗೂ ತೊಂದರೆ ನೀಡದೆ ಜೀವಿಸಿದ್ದೇವೆ. ನೀವು ಎಲ್ಲರಿಗೂ ಕಂಟಕರಾಗಿ ,ಭೂಮಿಗೂ ಭಾರವಾಗಿ ಬಾಳುತಿದ್ದಿರಿ ಅದಕ್ಕೆ ನಮಗೆ ಜೋರಾಗಿ ನಗೆಯು ಬರುತಿದೆ! ನಮಗೆ ನಿಮ್ಮನ್ನು ನೋಡಿ ನಗೆಯು ಬರುತಿದೆ" ಎಂದು ನನ್ನ ಕ್ಯಾಮರ ಮುಂದೆ ನಕ್ಕವು!
ನಾನು ಏ ಹಾಗೇನಿಲ್ಲ ,ಹಾಗೇನಿಲ್ಲ ಅಂತಾ ಪೆಚ್ಚು ಮೊರೆ ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತೆ. ಬೆವರಿಳಿಸಿದ ಆ ಕೊಕ್ಕರೆಗಳ ಚಿತ್ರ ನೆನಪಲ್ಲಿ ಹಾಗೆ ಉಳಿದು ಕೊಂಡಿತು.ಅಲ್ಲಾ ಅವು ಹೇಳಿದ್ದು ನಿಜ ಆಲ್ವಾ ??? ನೀವೇನಂತೀರಿ ???
Comments
ಉ: ನಗೆಯು ಬರುತಿದೆ!ನಮಗೆ ನಗೆಯು ಬರುತಿದೆ !
In reply to ಉ: ನಗೆಯು ಬರುತಿದೆ!ನಮಗೆ ನಗೆಯು ಬರುತಿದೆ ! by kamalap09
ಉ: ನಗೆಯು ಬರುತಿದೆ!ನಮಗೆ ನಗೆಯು ಬರುತಿದೆ !