ನಗೆ ಸ೦ಪಿಗೆ
ಕವನ
ಸನ್ನಿವೇಶ:
ಪುಟ್ಟ ಕ0ದನ ಕೈಲಿ ನೀಲಿ ಕೊಡೆ.
ಅರಳಿ ನಿ0ತಿತು ನಗುತ ಆಕಾಶದೆಡೆ.
ಹಾಲುಬಣ್ಣದ ಕೆನ್ನೆ
ತಾ ಮರೆತು ನಕ್ಕಾಗ
ಸಿಹಿಗುಳಿಯು ಮೂಡಿ
ತೀವ್ರಭಾವವು ಕದಡಿ
ದೃಷ್ಟಿ ಸ್ಪ0ದಿಸುವ ಮೊದಲೆ
ಮರೆಯಾಯಿತಲ್ಲ.
ಮತ್ತೆ ಮೌನಕೆ ಶರಣಾಯಿತಲ್ಲ.
ನಾನು:
ಆ ನಗುವ ಪಡೆಯಲು
ಮತ್ತೇ ನೋಡಿದೆ
ಕಣ್ಣಲ್ಲೇ ಕಾಡಿದೆ
ಪ್ರೀತಿಯಿ0ದ ಪುಟ್ಟ ಬಾ ಅ0ದೆ.
ಕ0ದ:
ಬಣ್ಣದ ಫ್ರಾಕು ತೊಟ್ಟ ಕಿನ್ನರಿ ನಾನು.
ನಕ್ಕಾಗ ನಗದೆ
ಸಾವಿರ ಯೋಚನೆಗಳಲಿ
ಬ0ಧಿಯಾದ ನಿಷ್ಕರುಣಿ ನೀನು.
ನಾನು:
ಎಷ್ಟು ಕಾಡಿದರು ಬೇಡಿದರೂ
ಸಿಗದ ಗುಪ್ತಗಾಮಿನಿ ನೀನು.
ಒಮ್ಮೇ ನಕ್ಕುಬಿಡು
ನಿನ್ನ ಕೆನ್ನೆಗುಳಿಯಲ್ಲಿ
ಲಕ್ಷ ದೀಪೋತ್ಸವ ಮಾಡುವೆನು.
ಕ0ದ:
ನಗು ಅರಳಿಸೋ
ಮನಸಿದ್ದರೆ ನಗಿಸಿ ನೋಡು.
ನಿನ್ನ ಮನದಲಿ ನಾನಿಡುವೆ
ಒರಟು ಹೆಜ್ಜೆಯ ಜಾಡು.
ನೀ ಇತಿಹಾಸವಾದರೂ
ಅಳಿಸಿ ಹೋಗದ೦ತೆ.
ನಿರ್ಜೀವವಾದರೂ
ಮರುಜನ್ಮಕೆ ಕಾಯುವ೦ತೆ.
ನಾನು:
ಕಣ್ಣ ಅ೦ಗಳಕೆ ಕಾಡಿಗೆಯ ಬೇಲಿ
ಅದು ನಿನ್ನ ಚೆಲುವು.
ದೃಷ್ಟಿ ಇರುವುದು ಅಪರಿಮಿತದಲಿ
ಅದು ನಿನ್ನ ಗೆಲುವು.
ಹೇಗೆ ಸಾಧಿಸಿದೆ
ಅದನು ಇದನು ಎಲ್ಲದನು.
ಸ್ನೇಹದಲಿ ನಕ್ಕು ಗೆಲುವಾಗಿಸು ನನ್ನನು.
------ vishwanath B. H