ನಗೆ ಹೊಗೆಯಾಗದಿರಲಿ...!

ನಗೆ ಹೊಗೆಯಾಗದಿರಲಿ...!

ಕವನ

ನಗಬೇಡ ನಗಬೇಡ ನೋಡ...

ನಕ್ಕು ನಕ್ಕು ಅಂಗಿಸಬೇಡ...

ನಗಲು ಹೆಣ್ಣು ಸಾಮ್ರಾಟನ ಮಣ್ಣು

ಕೋಟೆ ಕೊತ್ತಲುಗಳು ಉರುಳಿದವು

ದಾಯಾದಿಗಳಲ್ಲಿ ಸಮರವಾಯಿತು

ಈ ಮಾದಕವಾದ ಸ್ತ್ರೀಯ ನಗೆಯಿಂದ....!

 

ನಗಬೇಡ ನಗಬೇಡ ಗೆಳತಿ

ನಾರಿಯ ನಗೆಯಿಂದಲೇ...

ಜರುಗಿತು ಮಹಾಭಾರತ ಕದನ

ಸಹಜ ನಗೆಯೆ ಸುಯೋಧನನ ಕೆಣಕಿ

ಕೌರವ ಪಾಂಡವರ ನಡುವೆ ಕುರುಕ್ಷೇತ್ರ..

ಧರ್ಮಾಧರ್ಮಗಳ ಸೆಣೆಸಾಟದ ಮೂಲ..

ಈ ಹೆಣ್ಣಿನ ಮಾದಕವಾದ ನಗೆಯಿಂದಲೇ..!

 

ನಗಬೇಡ ನಗಬೇಡ ಕೊಕ್ಕಾಸಿ ನಗಬೇಡ

ಬಹಿರಂಗವಾಗಿ ಪುರುಷ ಸಮುದಾಯದಲ್ಲಿ

ಪುರುಷರ ಮುಖವಾಡ ಧರಿಸಿರುವ...

ದುಶ್ಯಾಸನ.. ಕೀಚಕರ ಸಂಖ್ಯೆಯೆ ಅಧಿಕ..

ನಕ್ಕರು ನಗದಂತಿರಬೇಕು..ಮಂದಹಾಸದಿ..

ಸಮಸ್ಯೆಗೆ ಸಿಲುಕಲು ಕೃಷ್ಣ ಬರಲು ಇದು..

ದ್ವಾಪರಯುಗವಲ್ಲ...ಕಲಿಯುಗ..ಮರುಳೆ..!

 

-ಈರಪ್ಪ ಬಿಜಲಿ ಕೊಪ್ಪಳ

ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್