ನಟರಾಜ್ ಹನಿಗಳು !

ನಟರಾಜ್ ಹನಿಗಳು !

ಕವನ

ಸಾಮರಸ್ಯ...!

ಜನಾಂಗ ಜನಾಂಗ ಎಂದು

ಆಗದಿರಿ ನೀವು ಮಂಗ!

ಜನಾಂಗವೊಂದು ಸಮಾಜದ ಅಂಗ...

ಇದನರಿತು ನೋಡಿರಿ

ಪೂರ್ಣ ದೇಹದ ಸ್ವಾಸ್ಥ್ಯ

ಕದಡದಿರಿ ಸಮಾಜದ ಸಾಮರಸ್ಯ!

***

ದುಃಖ-ದುಮ್ಮಾನ; ಸನ್ಮಾನ!

ದುಃಖ ದುಮ್ಮಾನಗಳಿರುವಾಗಲೇ 

ಸನ್ಮಾನಗಳೂ ನಡೆಯಲಿಬಿಡಿ;

ನಿಮ್ಮ ಮುದುಡಿದ ಮನಕೆ 

ಕೊಂಚ ಮುದ ನೀಡಿಯಾವು!

***

ಮೇಘ ಸ್ಫೋಟ!

ಪಾಪ ಪ್ರಜ್ಞೆಗಳು ಚಿಗುರಿದಾಗಲೇ

ಎಚ್ಚೆತ್ತುಕೊಂಡರೆ ಸಂಭವನೀಯ ಮೇಘ

ಸ್ಫೋಟಗಳು ನಿಂತು ಹೋದಾವು!

***

ದಾರಿ ತೋರಿದ ಹರ!

ಎನ್ನ ಮನದೊಳಿಹರು ನನ್ನ ಶ್ರೇಷ್ಠ ಗುರು

ಅವರಾಣಾತಿಯಂತೆ ನಾ ಸಾಗುತಿಹೆ...

ಪರಮ ಧನ್ಯವಾದಗಳು ಗುರುವೇ

ಎನಗೆ ದಾರಿ ತೋರಿದ ಹರನೇ!

***

ಕ್ರಾಂತಿ-ಶಾಂತಿ

ಮನುಜನ

ಹುಟ್ಟೊಂದು

ಜಗದಲಿ

ತಮಟೆಯ

ಕ್ರಾಂತಿ....

   

ಸಾವೊಂದು

ಪ್ರಕೃತಿಯ

ಸದ್ದಿಲ್ಲದ

ವಿಲೀನ

ಶಾಂತಿ!

***

ಪಂಥಗಳು...

ಎಡವೆಂದು ಬಾಗದರಿ

ಬಲವೆಂದು ಬೀಗದಿರಿ

ಭುಜದ ಮೇಲಿನ ಈ

ಮಧ್ಯದಲಿ ವ್ಯವಹರಿಪ

ಶಿರವದನು ನೋಡಿ:

ಅದು ಎಡ-ಬಲಕೂ

ತಿರುಗಿ ನೇರ ನಡೆವುದು...

ಅದರಂತೆ ನೀ ಬಾಳಿ

ಯಶ ಪಡೆ ಮನುಜ;

ಜ್ಞಾನ ದೃಷ್ಟಿಯ ಬೀರಿ

ಶುದ್ಧ ಮಾನವನಾಗೊ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್