ನಡಿ ಕುಂಬಳವೇ ಟರ್ರಾ ಪುರ್ರಾ.. ಗೌಡರ ಪಟಾಲಮ್ಮೂ ಕೆರೆತಾವ ದಾರಿಯೂ

ನಡಿ ಕುಂಬಳವೇ ಟರ್ರಾ ಪುರ್ರಾ.. ಗೌಡರ ಪಟಾಲಮ್ಮೂ ಕೆರೆತಾವ ದಾರಿಯೂ

ಬರಹ

 

 




" ( ಸ್ವಗತ :

  "ಸುಮ್ನೆ ಕೂತ್ಕೊಂಡ್...... ಮಗೀನ್ ಕುಂಡಿ ಕೆತ್ದ""
ನಮ್ಕಡೀ ಗಾದಿ ನಿಂಗೆ ಸರಿಯಾಯ್ತು.
ಅಲ್ಲ ಗಣೇಶರ ಲೇಖನದ ಪ್ರತಿಕ್ರೀಯೆಯಲ್ಲಿ ನೀನ್ ಯಾಕೆ ಹಾಗೆ ಬರ್ದೆ? ನಿಂಗೇನ್ ಬೇಕಿತ್ತಾ ಇದ್?
ಸರಿ ಅನ್ಬವ್ಸ್!! 

ಎಲ್ಲಿಯದೀ  ಸದ್ದು..? "


ಮುಗಿದರೇನಾಯಿತು ಮೊಸರನ್ನ
ಇನ್ನೂ ಇದೆಯಲ್ಲ ಚಿತ್ರಾನ್ನ,

ಅಲ್ಲದೇ ಪುಳಿಯೋಗೆರೆ ಮೊಸರನ್ನ


ಅಶು ಕವಿತೆಯಿನ್ನೂ ಮುಗಿದಿರಲಿಲ್ಲ,

 

ಅವರ ಸವಂಡೇ ನಿಂತಿತಾ ,

ಅಥ್ವಾ ನನ್ನ ಎರಡೂಕಿವಿ ಮುಚ್ಚಿಕೊಂಡವೋ ಅರ್ಥವಾಗ್ಲಿಲ್ಲ. ಎಲ್ಲೆಲ್ಲಿ ಯಾರ ಕಾಲೋ ಕೈಯ್ಯೋ ಮತ್ತೆಂತದ್ದೋ ಬಾಡಿ ಪಾರ್ಟೋ ಹೇಳೋ ಹಾಗೇ ಇಲ್ಲ.
ಉಪ್ಪಿನಕಾಯಿಗೆಂತ ಉಪ್ಪಿನೊಳಗಿಟ್ಟ ಮಾವಿನಮಿಡಿಯಾದೆವೆಲ್ಲಾ.


ಕುಲುಕಾಟ ತುಂಬಿದ ಕಾರಿನೊಳಗಿಂದಲಾ ಅಥವಾ ರಸ್ತೆಯ ವೈಖರಿಯಿಂದಲಾ  ಅರ್ಥವಾಗಲಿಲ್ಲ. ಯಾವ ಯಾವುದರ  ಸ್ಕ್ರೂ ಇದರಲ್ಲಿ ಸಡಿಲವಾಗುತ್ತೋ ಕಾಲವೇ ಹೇಳಬೇಕು.ಆಗಲೇ ಇನ್ಸೂರ್ ಎರಡ್ಸಾರಿ ಕ್ಲೈಮ್  ಮಾಡ್ಸಿದ್ದರಿಂದ ಈ ಸಾರಿ ಕ್ಲೈಮ್ ಸಹಾ ಸಿಗಲ್ಲ ದೇವರೇ ಗತಿ, ಪ್ರತಿ ಕುಲುಕಾಟದಿಂದ ಅಲ್ಲಲ್ಲೇ ಅಡ್ಜಸ್ಟ್ ಆಗ್ತಾ ಇದ್ದರೆಲ್ಲ. ಇದು  ರಾಮಾಯಣವಾ  ಮಹಾಭಾರತವಾ ಅರ್ಥವಾಗಲಿಲ್ಲ. ಕಪಿಗಳ ಸೈನ್ಯ, ರಾಮ  ಇದ್ದದ್ದರಿಂದ ರಾಮಾಯಣ , ಭೀಮ, ಗಧೆ,..ಆದರೆ ಗಣೇಶರ ತಿಂಡಿ ಈ ಪಟಾಲಮ್ ಖಾಲಿ ಮಾಡಿದ ಮೇಲೆ ಆಗೋದು...?


ಇದು ಗ್ಯಾರಂಟೀ ಗಣೇಶರ ಕನಸಿನೊಳಗೆ ನಾನು ಎಂಟ್ರಿ ಆದ ಫಲವೇ.


ಗಡಗಡ ಶಬ್ದ ಬರಲು ಶುರುವಾಯ್ತು. ನಡಿ ಕುಂಬಳವೇ ಟರ್ರಾ ಪುರ್ರಾ ನೆನಪಾಯ್ತು, ಮತ್ತೆ ಗಡಗಡ ಗಡ ಗಡ.


ಚಿತ್ರಾನ್ನ  ವಾಸ್ನೀ ಅದೂ ಹಳಸಿದ್ದಾ, ಅಲ್ಲ ಕಲಾ ನಮ್ ಗೌಡಪ್ಪ......


ಇನ್ನೊಂದು ಪ್ಯಾಕೇಟ್ ಸಹಾ ಮುಗಿಯಿತು, ನಮ್ಮೆಲ್ಲರ ಗತೀ ನಿಂಗನ ಚಾ  ಚಲ್ಟಾನೇ.


ಗಣೇಶಣ್ಣನ್ ಡ್ರೈವರ್ ಗಾಡೀ ಎಡಕಡೆಯಾಗೇ ಬಿಡಪ್ಪ.


ಯಾ ಥೂ!! ಏನ್ಲಾ ಇದು, ಸವದತ್ತಿಯ ಜಾತ್ರೆ ಅಂದ್ಕೊಂಡ್ರೇನ್ರೋ, ಪಾಪ ಪ್ಯಾಟಿ ಕಡೀಂದ ಬಂದವ್ರೆ ಅವ್ರೀಗೂ ವಸಿ ಕೊಡ್ಬೇಕೂ ಅನ್ನೋ ಗ್ಯಾನ  ಇಲ್ವ್ರಾ ನಿಮ್ಗೆ, ಅಲ್ಸೇಸಿಯನ್ ಪೆಡಿಗ್ರೀ ಮುಕ್ದಂಗ್ ಮುಕ್ತೀರಲ್ಲ್ರೋ ಅಂತ ಮಾತು ಕೇಳ್ಸಿತ್ತು .

 

ಓ ಕೋಮಲ್ ಬಂದ್ರು ಗಣೇಶರ ಮಾತು ಕೇಳ್ಸ್ತು.

 

ಮುಖ ತಿರುಗಿಸಲು ಪ್ರಯತ್ನ ಪಟ್ಟೆ ಆಗಲಿಲ್ಲ, ಯಾರದ್ದೋ ಹರಿದ ಬನ್ಯನ್ ನಲ್ಲಿ ಅರ್ಧ್ ಎದೆ ಮಾತ್ರ ಕಂಡಿತು. ಅದೂ ಹದಿನಾರು ಪ್ಯಾಕ್ನಲ್ಲಿ.


ಅದೇನಣ್ಣಾ ಅಂಗಂದ್ರೆ....? ಸುಬ್ಬ


ಏ ಥೂ !!,ಪ್ಯಾಟಿ ಕಡಿಯೋರೂ ದೊಡ್ಡದೊಡ್ಡನಾಯಿ ಸಾಕ್ಕಂಡಿರ್ತಾರೆ, ಅದಕ್ಕೆಲ್ಲಾ ಹಾಕೋ ತಿಂಡಿ ಕಲಾ


ನಾಯಿಗ್ಳೂ ನಮ್ಮಲ್ಲಿನ್ ತರಾ  ಕೆರೆತಾವ ಹೋಗಲ್ವಾ?


ಏ ಥೂ !! ಅಲ್ಲೆಲ್ ಕೆರೆ !! ಎಲ್ಲಾ ಮಾರಿ ನುಂಗಿ ಹಾಕ್ಯಾರೆ


ಅಂಗಾರೆ ಅಲ್ಲೂ ನಮ್ ಗೌಡ ಸಾನೇ ಫೇಮಸ್ಸೂ


ಅಲ್ಲೆಲ್ ಗೌಡ!!!!, ಗೌಡ್ನಂತೋರು ಊರೆಲ್ಲಾ ಕಲಾ


ಹಂಗಾರೆ ಅಲ್ಲಿಗ್ ಹೋಗೋವಾಗ ಮೂಗ್ ಮುಚ್ಕಂಡೆ ಹೋಗೋದೇಯಾ.


ಇಲ್ಲ ಕಲಾ ಅಂತದ್ದೇನಿಲ್ಲ ಅಲ್ಲಿ, ಸಾನೇ ಫೇಮಸ್ ಸಿನ್ಮಾದೊರೆಲ್ಲಾ ಅಲ್ಲೇ ಇದ್ದಾರೆ

 

ಹಂಗಾರೆ ಅವ್ರೆಲ್ಲಾ ಸೆಂಟ್ ಹಕ್ಕಂಡಿರ್ತಾರಾ?

 

ಹೂ ಕಲಾ ಪ್ಯಾಟಿ ಕಡಿ ಅಂಗ್ಡೀಲೆಲ್ಲಾ ಅದೇ ಟಸ್ಸೂ ಪುಸ್ಸೂ  !!! ನಮ್ ಗೌಡನ್ ಮುಂದಿನ್ ಬತ್ಡೇಲೂ ಅದನ್ನೇ ಗಿಫ್ಟ್ ಕೊಡೋನಾಂತಿದೀನಿ.


ಅಲ್ಲ ಸೀನಾ  ಬೆಂಗ್ಳೂರ್ದೋರ್ದೆಲ್ಲಾ ಡಬ್ಬ ಕಾರೇಯಾ, ಇದ್ಕಿಂತ ನಮ್  ಇಸ್ಮಾಯಿಲ್ ಬಸ್ಸೇ ವಾಸಿ, ಏನಿಲ್ಲ್ ಅಂತಾನಾರು ಎಳ್ಡು ಎಮ್ಮೆಕರಾ ಅರೂ ಬರ್ತದೆ, 

 

ಹೂ ಕಲಾ.

 

ಮಧ್ಯದಲ್ಲೆಲ್ಲೋ ಮೊಸರನ್ನದ ಪರಿಮಳವೂ ನನ್ನ ಮೂಗಿನ ದ್ವಾರದಲ್ಲೆಲ್ಲೋ ಸವರಿದ ಹಾಗೆ ಆಗಿ ಪಕ್ಕದಿಂದ ಬಂದ ಹಳಸಿದ ವಾಸನೆ ಅದನ್ನೂ ಹಾರಿಸಿಕೊಂಡು ಹೋಯ್ತು.


ಢಮಾರ್!!


ಗಾಡಿ ನಿಂತಿತೋ, ಇಂಜಿನ್ನಾ ಅರ್ಥ  ಅಗ್ಲಿಲ್ಲ.


ಅಷ್ಟರಲ್ಲಿಯೇ ನನ್ನ ಕಾಲ್ ಮೇಲೆ ಏನೋ ಮುಳುಮುಳು ಹರಿದಾಡಿದ ಹಾಗಾಯ್ತು,

 

ಗಣೇಶರ....ಕಿಸೆಯಿಂದಾನಾ, ಅಥವಾ ಕೆರೆ ಹತ್ತಿರ ಬಂತಾ...??!!??? ಅರ್ಥವಾಗ್ಲಿಲ್ಲ.

 

ಯಾಕೋ ಕೋಮಲ್ ನೆನಪು ಒತ್ತರಿಸಿ ಬಂತು


ಎಲ್ಲಿದ್ದೀರಾ  ಕೋಮಲ್!!!!

ಗಣೇಶರಿಗೆ ಖೋಕ್

 

 

ಹಿಂದಿನ ಕಥೆಗೆ  ಇಲ್ಲಿ ಕುಟುಕಿ  http://sampada.net/blog/%E0%B2%97%E0%B2%A3%E0%B3%87%E0%B2%B6/02/10/2010/28266