ನಡೆಯುವುದು ನಡೆಯುತ್ತಿದೆ

ನಡೆಯುವುದು ನಡೆಯುತ್ತಿದೆ

ಹಾರುವ ಪಕ್ಷಿ ಅಕ್ಷಿಪಟಲ ಮೀರಿಹಾರುತ್ತಿದೆನೀರ ಕನ್ನಡಿ ಚೂರಾಗಿಹಬೆಯಾಗಿಮೇಘಗರ್ಭ ಕಟ್ಟಿನೀರಾಗಿ ಸುರಿಯುತ್ತಿದೆಅಲೆಯಾಗಿ ಸೆಳೆಯುತ್ತಿದೆಸುನಾಮಿಯಾಗಿ ಭೋರ್ಗರೆಯುತ್ತಿದೆ ನಡೆಯುವುದು ನಡೆಯುತ್ತಿದೆತಿರುಗುತ್ತಿದೆ ಭೂಮಿಕಿರುಗುಡದೇಉರಿವ ರವಿ ಊರ ತೊರೆದುನಗುಚಂದ್ರ ಮೊಗ ತೆರೆದುಸಂಜೆಗತ್ತಲುತುಂಬಿ ತೊನೆಯಲುಒಳಗಣ್ಣಜ್ಜಿಯ ನುಂಗಲುಅಲ್ಲೇಸಾವು ಕಾದಿದೆಶುರುವಾಗಿದೆ ಮತ್ತೆಲ್ಲೋಹೆರಿಗೆ ಬೇನೆಈ ಪಂದ್ಯಕ್ಕಿಲ್ಲ ಕೊನೆಬಿಸಿಲಿಗೆ ಬಾಗುತ್ತಿದೆಅಜ್ಜಿ ನೆಟ್ಟು ಬಿಟ್ಟುಹೋದ ತೆನೆ ಒಡೆಯುತ್ತಿದೆ ಬೀಜ ಒಂದಂಕುರಕ್ಕೆತಲೆ ಬಾಗಿಸಿದಂತೆಚಿಗುರಾಗಿ ಹಗುರಾಗಿಮರವಾಗಿ ಬೆಳೆದುಉದುರಿದೆ ಬೀಜಬಸಿರಾಗಿ ಹರಿದುಮೊರೆದಿದೆ ಜೀವ ಮತ್ತೆ ಮತ್ತೆಬಡಿಯುತ್ತಿದೆ ಹೃದಯಹಗಲೆನ್ನದೇ ಇರುಳೆನ್ನದೇನೆತ್ತರ ಅಣುಕಣದೊಳಗೆಕಾಣದ್ದೇನೋ ಪ್ರವರ್ಧಿಸುತ್ತಿದೆಸತ್ತವರು ಹುಟ್ಟುವವರುಅಲ್ಲೆಲ್ಲೋ ಸಂಧಿಸುತ್ತಿದ್ದಾರೆ ಅರಳುತ್ತಿದೆ ಹೂವು ಬೆತ್ತಲೆದೆ ತೆರೆದುದಾರಿಗುಂಟ ಬಂದಭ್ರಮರಗಳು ಹೀರಿವೆ ಮಧುಹಂಚಿವೆ ಸಿಹಿ ಬುಟ್ಟಿಜೇನ ಕಟ್ಟಿಗೋಡೆಯಿಲ್ಲದ ಗಾಳಿಗೆತನ್ನೊಡಲ ವಾಂಛೆ ಪಸರಿಸಿಕೆರಳುತ್ತಿದೆ ಸರ್ಪಕಪ್ಪೆ ನಡುಗಲುಅದರ ಬಾಯ ಹುಳುಸಾವಿನವಸರಕ್ಕೆಅದುರಾಡಿ ಬೆದರಿ ಒದರಾಡಿದೆಹುಟ್ಟಿದ ಹುಲ್ಲು ಹುಲ್ಲೆಯಬಾಯಿಗೆಆದರೆ ಹುಲಿಯ ಹಸಿವಿಗೆದಾಹಗಳು ಲೋಕರೂಢಿಗಳಾಗಿ ಗೋಚರಿಸುತ್ತಿವೆ ಒಣ ನೆಲವೂ ಸೋತುಜಲ ಜಿನುಗಿಸಿದೆಕೊರಡು ಕೊನರಿದೆಇಂಧನವಿಲ್ಲದಿದ್ದರೂವೀರ್ಯಾಣುಅಂಡಾಣುವನ್ನರಸಿದೆಸ್ಪಷ್ಟ ನಿರ್ವಾತದಲ್ಲಿಅಸ್ಪಷ್ಟ ಗೆರೆಗಳಿಲ್ಲದೇಒಂದನ್ನೊಂದು ಬಿಗಿದಪ್ಪುತ್ತಿವೆ ಜಗವೇ ಒಂದು ಗಂಟಾಗಿ ಮೇಲಕ್ಕೆ ಕೆಳಕ್ಕೆ ಜಿಗಿವಮೆಟ್ಟಿಲಾಗಿಮಿಲನಗೊಳ್ಳುತ್ತಿದೆಆಶ್ಚರ್ಯಗಳು ಮಲ್ಲಿಗೆಯಾಗಿಹಾರವಾಗಿ ಬಾಡುತ್ತಿವೆಕಾಡುತ್ತಿವೆಕತ್ತಿ ಹಿಡಿದಮಾತನಾಡುವ ವೀರ್ಯಾಣುಗಳುಅವುಗಳ ಹಿಂದ್ಹಿಂದೆನೆಗೆಯುತ್ತಿವೆನುಗ್ಗುತ್ತಿವೆ ಕರಿಗೆರೆಗಳುಪ್ರಖರ ಪ್ರವರ ಕಿರಣ ನುಂಗಿಭೂಮ್ಯಾಕಾಶ ಪಸರಿಸಿಜಗವೇ ಛಿದ್ರವಾಗುತ್ತಿದೆಗೆದ್ದಲು ಕಟ್ಟಿದ ಮನೆಗೆಹಾವು ನುಗ್ಗುತ್ತಿದೆ ಒಟ್ಟಿನಲ್ಲಿ ನಡೆಯುವುದು ನಡೆಯುತ್ತಿದೆಅಡೆತಡೆಯಿಲ್ಲದೇ ನಿಜಕ್ಕೂ!

Comments

Submitted by H A Patil Fri, 10/04/2013 - 12:54

ಮೋಹನ ವಿ ಕೊಳ್ಳೆಗಾಲ ರವರಿಗೆ ವಂದನೆಗಳು " ನಡೆಯುವುದು ನಡೆಯುತ್ತಿದೆ " ಇದು ಕವನವೆಂದು ನನ್ನ ಗ್ರಹಿಕೆ ಬಹಳ ಚೆನ್ನಾಗಿ ಮೂಡಿ ಬಂದಿದೆ. ಕೊನೆಯಲ್ಲಿ ಬರುವ " ಗೆದ್ದಲು ಕಟ್ಟಿದ ಮನೆಗೆ ಹಾವು ನುಗ್ಗುತಿದೆ ' ಈ ಕವನದ ಬಹಳ ಅರ್ಥಪೂರ್ಣ ಸಾಲು ಇದು ಕವನದ ಗಹನತೆಯನ್ನು ಹೆಚ್ಚಿಸಿದೆ. ಉತ್ತಮ ರಚನೆ ನೀಡಿದ್ದೀರಿ ಧನ್ಯವಾದಗಳು,
Submitted by Mohan V Kollegal Fri, 10/04/2013 - 15:19

ಹೌದು ಸರ್... ಇದು ಕವಿತೆ... ಲೇಖನಗಳ ವರ್ಗದಲ್ಲಿ ಸೇರಿಸಿ ತಪ್ಪು ಮಾಡಿದ್ದೇನೆ ಅನಿಸುತ್ತಿದೆ... ಕವಿತಾ ವಿಭಾಗದಲ್ಲೊಮ್ಮೆ ಪ್ರಕಟಿಸುತ್ತೇನೆ... ಓದಿದ್ದಕ್ಕೆ ವಂದನೆಗಳು... :)
Submitted by Mohan V Kollegal Fri, 10/04/2013 - 15:30

In reply to by Mohan V Kollegal

ಇದು ಕವಿತೆ... ಲೇಖನವಾಗಿದೆ... ಮತ್ತೆ ಕವಿತೆಗಳ ಕಡತದಲ್ಲಿ ಪ್ರಕಟಿಸಿದ್ದೇನೆ... ಓದುಗರ ತಾಳ್ಮೆಗೆ ವಂದನೆ... :) ಅದರ ಕೊಂಡಿ http://www.sampada.n...