ನನಗೆ ಬ್ರೌನ್ ಕಲರ್ ಯಾಕೆ ಇಷ್ಟ?
ಬರಹ
ನನ್ನ ಪ್ರೀತಿಯ ನಲ್ಲೆ...
ಕಾಡುವರು ಎಲ್ಲರು ನನ್ನನ್ನು ಇಂದು
ಏಕೆ ನಿನಗೆ ಆಸೆ ಬರಿ ಬ್ರೌನ್ ಕಲರ್ ಎಂದು...
ಏನೆಂದು ಉತ್ತರಿಸಲಿ ನಾನು ಅವರಿಗೆ ಈಗ
ನೀ ಹಾಕಿದೆಯಲ್ಲ ಆ ಒಂದು ಬಣ್ಣಕ್ಕೆ ಬಿಟ್ಟು ಬೀರೆಲ್ಲಕ್ಕು ಬೀಗ...
ಇಷ್ಟು ಹೇಳಿದರೂ ಅರ್ಥವಾಗಲಿಲ್ಲ ನನ್ನ ಮನದ ವೇದನೆ
ಬಾ ನನ್ನಲ್ಲಿ ನಿಂತು ನೀನೆ ಉತ್ತರಿಸು ಅವರಿಗೆ ಬೇಗನೆ...
ಹೌದು ನಿನಗಾದರು ಏಕೆ ಇಷ್ಟ ಆ ಬಣ್ಣ ?
ನನ್ನ ಪ್ರೀತಿಯ ಪ್ರಭೆಯಲ್ಲೇನಾದರು ಇತ್ತೇ ಆ ವರ್ಣ ?
ಇಂತಿ ನಿನ್ನ ಪ್ರೀತಿಯ
-ವಾದಿರಾಜ ಆಚಾರ್ಯ