ನನಗೆ ಮರಣ

ನನಗೆ ಮರಣ

ಕವನ

ಮೂಡಲಿಲ್ಲ 

ಭಾವನೆಗಳು

ಸೇರಲಿಲ್ಲ

ಸುಖದ ಕಡಲು

ಹಳತು ವಿಷಯ

ಹೊಸತು ಜನ್ಮ

ಹುಟ್ಟಿದಾಗ ನನಗೆ ಮರಣ

ತೀರಲಿಲ್ಲ

ದ್ವೇಷದೊಡಲು

ಕಾಣಲಿಲ್ಲ

ಪ್ರೀತಿಯೊಲವು

ಪ್ರೇಮದಲೆಯು

ದೂರ ಸೇರಿ

ಹೋದ ಸಮಯ ನನಗೆ ಮರಣ

 

ಕೂತ ಕಡೆಗೆ

ಸೆಳೆತವಿಲ್ಲ

ಮಣ್ಣಿನೊಳಗೆ

ಮಾತು ಹೂತು

ಕಣ್ಣ ಸನಿಹ

ನಿಲ್ಲದಾದೆ

ಕಾಣದಾಗ ನನಗೆ ಮರಣ

ಚಿತ್ತ ಸೋಲು

ಕಂಡ ರೀತಿ

ಹೊತ್ತು ಹೋಗೆ

ದೂರದಲ್ಲಿ

ಸನಿಹ ಯಾರು

ನಿಲ್ಲದಿರಲು

ಮರೆತ ಸಮಯ ನನಗೆ ಮರಣ 

 

-ಹಾ ಮ ಸತೀಶ

 

ಚಿತ್ರ್