ನನಗೊಂದು ನನ್ನದೇ ಬದುಕಿದೆ ಎಂದು ಆಕೆ ತಿಳಿಸುವುದು ಹೇಗೆ?

ನನಗೊಂದು ನನ್ನದೇ ಬದುಕಿದೆ ಎಂದು ಆಕೆ ತಿಳಿಸುವುದು ಹೇಗೆ?

Comments

ಬರಹ

ಪಡ್ಡೆ ಹುಡುಗರ ಮನಸ್ಸಿನಲ್ಲಿ ತನ್ನ ಅದ್ಭುತ ಆಟದ ಮೂಲಕ ಅಲೆಯೆಬ್ಬಿಸಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಮತ್ತೊಮ್ಮೆ ವಿವಾಹದ ವಿಷಯದಲ್ಲಿ ಸುದ್ದಿಯ ಕೇಂದ್ರ ಬಿಂದುವಾಗಿದ್ದಾಳೆ. ಪಾಕಿಸ್ತಾನದ ಖ್ಯಾತ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ನನ್ನು ವರಿಸಲು ಮುಂದಾಗಿರುವುದೇ ಈಗ ವಿವಾದವಾಗಿದೆ. ಈ ವಿವಾಹ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಭಾರತವನ್ನು ಪ್ರತಿನಿಧಿಸುತ್ತಿದ್ದ ತಾರೆಯೊಬ್ಬಳು ವಿವಾಹದ ನಂತರ ತನ್ನ ಗಂಡನ ದೇಶವನ್ನು ಪ್ರತಿನಿಧಿಸಬೇಕು ಎಂಬ ವಿಚಾರಕ್ಕಿಂತಲೂ ಆಕೆ ಪಾಕಿಸ್ತಾನವನ್ನು ಪ್ರತಿನಿಧಿಸುತ್ತಳಲ್ಲ ಎಂಬ ಚಿಂತೆಯೇ ಮುಂದಿರುವಂತೆ ಕಾಣಬರುತ್ತಿದೆ. ಈ ಕುರಿತು ಹಲವಾರು ನಾಯಕರು ಭಾರೀ ಹೇಳಿಕೆಗಳನ್ನು ನೀಡಿದ್ದಾರೆ. ಮಹಾರಾಷ್ಟ್ರದ ಹುಲಿ ಮತ್ತೊಮ್ಮೆ ಘರ್ಜಿಸಿದೆ. ಸಾನಿಯಾ, ತನ್ನ ವಿವಾಹದ ನಂತರವೂ ಭಾರತವನ್ನು ಪ್ರತಿನಿಧಿಸಿಯೇ ಆಡುತ್ತೇನೆಂದು ಸ್ಪಷ್ಟವಾಗಿ ಹೇಳಿದ್ದಾಳೆ.  ಆದರೂ ಚರ್ಚೆಗಳು ನಿಂತಿಲ್ಲ. ಇಲ್ಲಿ ಈ ವಿವಾಹವನ್ನು ವ್ಯಕ್ತಿಗಳಿಬ್ಬರ ಭಾವನಾತ್ಮಕ ವಿಷಯವೆಂದು ಪರಿಗಣಿಸಬೇಕೆ? ಇಲ್ಲ ರಾಷ್ಟ್ರ ರಾಜಕಾರಣಕ್ಕೂ ಖಾಸಗಿ ಬದುಕಿಗೂ ತಳುಕು ಹಾಕಬೇಕೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet