ನನಸಾಗಲಿ ಕನಸು

ನನಸಾಗಲಿ ಕನಸು

ಕವನ

ಚಿಂದಿಯನಾರಿಸಿ ಬದುಕುವ ಬಾಲಕ

ನೊಂದಿಹ ಕಂಬನಿ ಕಣ್ತುಂಬ

ಬಂದನು ಕನ್ನಡಿ ಎದುರಲಿ ನಿಂದನು

ಕಂಡನು ಕಲ್ಪಿತ ಪ್ರತಿಬಿಂಬ

 

ಬಣ್ಣದ ಕನಸಿಗೆ ರೆಕ್ಕೆಯು ಮೂಡಿದೆ

ತನ್ನನೆ ಕಲ್ಪಿಸಿ ದರ್ಪಣದೆ

ಸಣ್ಣನೆ ನೋವಿನ ನಡುಕವು ತನುವಲಿ

ಬಣ್ಣನೆಗೆಟುಕದ ಮಿಡಿತವಿದೆ

 

ಬಡವನ ಬಾಳಲಿ ಬರವಿದೆ ತಿನಿಸಿಗೆ

ಗಡಿಯನು ಮೀರಿದ ಕನಸುಗಳು

ದಡವನು ಸೇರಲು ನೌಕೆಯು ದೊರೆವುದೆ

ತುಡಿತವು ತುಂಬಿದ ಬಯಕೆಗಳು

 

ಹಣೆಯಲಿ ಪದವಿಯು ಬರೆದಿಹುದಾದರೆ

ಕನಸಿನ ಕದಗಳು ತೆರೆಯುವುದು

ಮನದಲಿ ಮೂಡಿದ ವಿದ್ಯೆಯ ದೊರೆತರೆ

ತನುಮನ ನೆಮ್ಮದಿ ಕಾಣುವುದು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್