ನನಸಿನಲ್ಲಿ ಬಂದ ರಾಜಕುಮಾರ!
ಕವನ
ಖುಷಿಯಾದೆಡೆ ಮನಬಂದಂತೆ
ಓಡಾಡಿಕೊಂಡಿದ್ದೆ ಅಂದು
ನೀನಿರುವೆಡೆ ಎಳೆದೆಳೆದು
ಓಡಿಸುತ್ತಿದೆ ಮನಸು ಇಂದು
ಪ್ರೇಮಪಾಶದಲಿ ಸಿಲುಕದೇ
ಮುದದಿಂದ ಕೂಗಿಕೊಂಡಿದ್ದೆ ಅಂದು
ನಿನ್ನ ಪ್ರೇಮದಲಿ ನಿಲುಕಿ
ನಿನಗಾಗಿ ಕೂಗುತ್ತಿದ್ದೇನೆ ಇಂದು
ರಾಜಕುಮಾರ ಕನಸಿನಲ್ಲಿ ಬರುವನೆಂದು
ಕಾದುಕೊಂಡಿದ್ದೆ ಅಂದು
ನನಸಿನಲ್ಲಿ ಬಂದ ನಿನ್ನನ್ನೇ
ರಾಜಕುಮಾರನೆಂದಿರುವೆ ಇಂದು!