ನನ್ನಂತಿರುವ ರುತುಗಳಿವೆ...

ನನ್ನಂತಿರುವ ರುತುಗಳಿವೆ...

ಕವನ

  ನನ್ನ ರೆಪ್ಪೆಯಲ್ಲಿ ಕೆಲವು...

ಧ್ವನಿಗಳಿವೆ.

ಕೋಗಿಲೆ, ಗಿಳಿಗಳ ಕ್ಷಣಗಳಿವೆ...!!


ನನ್ನ ಹ್ರುದಯದ ಬಳಿ ಕೆಲವು....

ಸ್ವರಗಳಿವೆ..

ಸುಪ್ರಭಾತ,ಸೂರ್ಯಾಸ್ತದ ಕ್ಷಣಗಳಿವೆ...!!


ನನ್ನ ನಿದ್ದೆಗಳಲ್ಲಿ ಕೆಲವು...

ಕನಸುಗಳಿವೆ...

ಚಿಗುರು ಕೆಂಪಿನ ಕ್ಷಣಗಳಿವೆ.....!!

 

ನನ್ನ ಉಸಿರಲ್ಲಿ ಕೆಲವು...

ನೆನಪುಗಳಿವೆ.

ತಂಪಿನ,ಆರ್ದ್ರತೆಯ ಕ್ಷಣಗಳಿವೆ....!!


ಹೀಗೆಯೇ ಹಬ್ಬಿಕೊಂಡಿರುವ ಒಲವುಗಳಿವೆ.......

ಸವಮ್ಯ,ಸ್ನಿಗ್ದತೆಯ,ಸುಂದರ ಚೆಲುವುಗಳಿವೆ......

ನನ್ನದಲ್ಲದಿದ್ದರೇನು...?ನನ್ನಂತಿರುವ ರುತುಗಳಿವೆ...!!

 

Comments