ನನ್ನಜ್ಜಿ
ನನ್ನಜ್ಜಿ
ನನ್ನಜ್ಜಿ ನನ್ನಜ್ಜಿ
ಪ್ರೀತಿಯ ಆಗರ
ಒಲವಿನ ಸಾಗರ
ಈಗ ಬರಿ ನೆನಪಿನಲ್ಲಿ ಅಮರ
ನನ್ನಜಿ ನನ್ನಜಿ
ಅವಳೆದೆ ಗೂಡಲ್ಲಿ
ಅದೆಷ್ಟು ಜೇನುಗಳು
ಸಿಹಿಯ ತಂದು ಸುರಿದಿದ್ದವೋ
ನಮಗೆಲ್ಲ ಪ್ರೀತಿಯ ಸವಿಜೇನ ಉಣಿಸಿದಳು
ನನ್ನಜಿ ನನ್ನಜಿ
ವಿಶಾಲ ಆಗಸವೇ
ನೂರರ ಹರೆಯದ ಅವಳ ಮನಸು
ಅದೆಷ್ಟು ನಿಷ್ಕಳಂಕ ನಿರ್ಮಲ
ನಮಗೆ ನಿಸ್ವರ್ಥವ ಕಲಿಸಿದಳು
ನನ್ನಜಿ ನನ್ನಜಿ
ಯಾರನ್ನು ಜರಿಯಲಿಲ್ಲ
ಯಾರಲ್ಲೂ ಮುನಿಯಲಿಲ್ಲ
ಅವಳ ಪ್ರೀತಿಗೆ ಸರಿಸಾಟಿಯಾರಿಲ್ಲ
ಭಾವ ತುಂಬಿದ ಭಾಗ್ಯ ಜ್ಯೋತಿ
ನನ್ನಜಿ ನನ್ನಜಿ
ಬರೀ ನೆನಪಾದರು ಅವಳು
ನಮ್ಮೆಲ್ಲರ ಉಸಿರು
ನಮ್ಮ ಬಾಳ ಹಸಿರು
ಕ್ಷಣ ಕ್ಷಣದಲ್ಲೂ ಕಣಕಣದಲ್ಲೂ ಅವಳದೇ ಹೆಸರು
ನನ್ನಜಿ ನನ್ನಜಿ