ನನ್ನವನ ಕಂಡೆ ನಾ ಚಂದ್ರಮನಲಿ
ಒಂದಿರುಳು ಚಂದಿರನ ನೋಡಿ ಆನಂದಿಸಲು
ಬಂದು ಅಂಗಳದಲ್ಲಿ ನಿಂದೆ ನಾನು
ಇಂದುವಿನ ಮೊಗದಲ್ಲಿ ಇಂದಿದೇನಾಶ್ಚರ್ಯ
ಎಂದಿಲ್ಲದಾ ಸೊಬಗ ಕಂಡೆ ನಾನು
ತಂಗಾಳಿ ಸೋಂಕಿ ಮೈ ನವಿರೇಳುತಿರಲಾಗ
ತಿಂಗಳಿನ ಶೀತಕಿರಣಗಳು ಹರಿದು
ಅಂಗಳದಿ ಭೃಂಗವಿರಹಿಗಳಾದ ಮೊಗ್ಗುಗಳು
ರಂಗೋಲಿಯಿಟ್ಟಂತೆ ಭಾಸವಾಯ್ತು.
ಕಾಲ್ನಡಿಗೆಯಿಂದೆರಡು ಹೆಜ್ಜೆ ಮುಂದಿರಿಸುತ್ತ
ಮೇಲ್ನೋಡೆ ನಲ್ಲನನು ಕಂಡೆ ಶಶಿಯಲ್ಲಿ
ನಲ್ನುಡಿಯ ನುಡಿವೆನ್ನ ಮನದನ್ನನಿಲ್ಲೆಂತು
ಮೆಲ್ನುಡಿಯೊಳೆಂದೆ ಭ್ರಮೆಯಿರಬೇಕು ನನಗೆ
ಬೆರಗಾದೆ ನಾ ವಿಸ್ಮಯದಿ ನೋಡಿದೆನಾಗ
ಕರಗಳಲಿ ಕಣ್ಣುಜ್ಜಿ ಮತ್ತೆ ನೋಡಿದರೂ
ನರದ ದೌರ್ಬಲ್ಯವಿದು ಅರಳುಮರುಳೆನಗೆಂದು
ಎರಡೆರಡು ಸಲ ಕಣ್ಣ ಹೊಸಕಿ ನೋಡಿದರೂ
ಶಶಿಕರನ ಮಧ್ಯದಲಿ ಪ್ರಿಯಕರನ ನಾ ಕಂಡೆ
ಹಿಮಕರನೆ ಪ್ರಿಯತಮನ ಕದ್ದೊಯ್ದೆಯೇಕೆ?
ಹಿತಕರವಿದಲ್ಲ ನಾಂ ಹೃದಯದಲಿ ಬಚ್ಚಿಟ್ಟ
ಪ್ರಿಯಕರನ ಕಳಿಸೆಲೆ ಸುಧಾಕರನೆ ದಯದಿ.
ನಗುತ ಚಂದ್ರಮನೆಂದ ಮುಗುದೆ ಕಳವಳಿಸದಿರು
ಹಗರಣವ ಮಾಡದಿರು ಮಗುವಿನಂದದಲಿ
ಜಗದೊಳಗೆ ನಿನ್ನ ಪ್ರೇಮಿಯ ಸೆಳೆದು ಕರೆದೊಯ್ವ
ಬಗೆಯನ್ನದಾರು ಬಲ್ಲರು ಹೇಳು ಬಾಲೆ.
ಬಣ್ಣ ಬಣ್ಣದ ಮಾತು ಬೇಡ ಅಮೃತಾಂಶು
ನನ್ನವನ ನಿನ್ನೊಳಗೆ ಕಾಣುತಿಹೆ ನಾನು
ಕನ್ನ ಮಾಡಿಹೆ ನೀನು ಮುನ್ನ ಹಠ ಮಾಡದಿರು
ನನ್ನವನ ನಿನ್ನೊಳಗೆ ಕುಳಿತಿಹನ ಕಳಿಸಿಕೊಡು.
ನಿನ್ನಲ್ಲಿ ಮಂದಹಾಸವನು ಬೀರುತ್ತ
ನಿನ್ನಿನಿಯ ಕುಳಿತಿಹನು ನೋಡೆಂದ ಚಂದ್ರ
ನಿನ್ನೊಳಗೆ ಬೆಸೆದಿರುವ ಕಣಕಣದಿ ನೆಲೆಸಿರುವ
ನಿನ್ನೊಲವನನು ಹೇಗೆ ನನ್ನಲಿ ನಿರೀಕ್ಷಿಸಿಹೆ?
ನಿನ್ನೊಲವಿನಾ ಶಕ್ತಿ ನಿನಗೆ ತಿಳಿಯದು ನೋಡ
ನಿನ್ನೆದೆಯೊಳಿರುವ ಪ್ರಿಯತಮನ ಛವಿಯ
ನನ್ನಲ್ಲಿ ನೀ ಕಂಡೆ ನಿನ್ನೊಳಗೆ ನೋಡೆಂದ
ನನ್ನವನ ನನ್ನೊಳಗೆ ಕಂಡು ಅಚ್ಚರಿಗೊಂಡೆ
ಚಂದ್ರನೆಂದಿಹ ನುಡಿಯುಎನು ಚಂದ?
ನಿನ್ನೆದೆಯ ನುಣುಪಾಗಿ ಉಜ್ಜಿರುವ ಅನುರಕ್ತಿ
ನಿನ್ನೆದೆಯ ಕಲುಷಗಳ ತೊಳೆದಿರುವದು
ನಿನ್ನಲ್ಲಿ ಅಡಕವಾಗಿರುವ ಪ್ರೇಮದ ಶಕ್ತಿ
ನಿನ್ನೆದೆಯ ಮಧುರತೆಯ ಹೆಚ್ಚಿಸಿಹುದು
ನಾನು ದರ್ಪಣವಾದೆ ನಿನ್ನ ಪ್ರೀತಿಗೆ ಸೋತು
ನಿನ್ಹೃದಯ ಪಾರದರ್ಶಿಯು ನಿರ್ಮಲ
ನಿನ್ನ ಪ್ರೇಮಿಯ ಬಿಂಬ ನನ್ನಲ್ಲಿ ನೀ ಕಂಡೆ
ನಿನ್ನೊಲುಮೆ ಅದ್ಭುತವು ಎನೆ ಶೀತಕಿರಣ
ಪ್ರೇಮದಾ ಉತ್ಕೃಷ್ಟ ಶಕ್ತಿಯರಿವೆನಗಾಯ್ತು
ತಾಮಸವ ಕಳೆದು ಬೆಳಕನು ತುಂಬುತ
ಕಾಮನೆಗಳನು ಮೀರಿ ಒಲವುಹೊರಸೂಸಿದರೆ
ಧಾಮವಿದು ಕೈವಲ್ಯ ಪ್ರೇಮಿಗಳಿಗೆ
Comments
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by raghumuliya
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by nagarathnavina…
ಉ: ನನ್ನವನ ಕಂಡೆ ನಾ ಚಂದ್ರಮನಲಿ
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by asuhegde
ಉ: ನನ್ನವನ ಕಂಡೆ ನಾ ಚಂದ್ರಮನಲಿ
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by Harish Athreya
ಉ: ನನ್ನವನ ಕಂಡೆ ನಾ ಚಂದ್ರಮನಲಿ
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by sada samartha
ಉ: ನನ್ನವನ ಕಂಡೆ ನಾ ಚಂದ್ರಮನಲಿ
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by partha1059
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by partha1059
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by nagarathnavina…
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by partha1059
ಉ: ನನ್ನವನ ಕಂಡೆ ನಾ ಚಂದ್ರಮನಲಿ
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by sanjay s
ಉ: ನನ್ನವನ ಕಂಡೆ ನಾ ಚಂದ್ರಮನಲಿ
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by Tejaswi_ac
ಉ: ನನ್ನವನ ಕಂಡೆ ನಾ ಚಂದ್ರಮನಲಿ
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by manju787
ಉ: ನನ್ನವನ ಕಂಡೆ ನಾ ಚಂದ್ರಮನಲಿ
In reply to ಉ: ನನ್ನವನ ಕಂಡೆ ನಾ ಚಂದ್ರಮನಲಿ by manju787
ಉ: ನನ್ನವನ ಕಂಡೆ ನಾ ಚಂದ್ರಮನಲಿ