ನನ್ನವಳಿಗೆ……

ನನ್ನವಳಿಗೆ……

ಬರಹ

ಕಾಣದ ಮನಸಿನ ತು೦ಬಾ
ಪ್ರೀತಿಯ ಅಕ್ಷರವಿದೆಯೋ
ಮಿ೦ಚುವ ಕಣ್ಣಿನ ಒಳಗೆ
ಸ್ನೇಹದ ಅಕ್ಕರೆ ಇದೆಯೋ
ಜೀವನದ ಪ್ರತಿ ಪುಟದೊಳಗೆ
ನಿನ್ನದೆ ಬಣ್ಣದ ಚಿತ್ರ
ಸಾಧನೆಯ ಪ್ರತಿ ನಡೆಯಲ್ಲಿ
ನಿ೦ತಿದೆ ನಿನ ನೆನಪಿನ ಚಿತ್ರ
ಬಾರೆನ್ನ ಒಲವೇ ನನ್ನೊಲವೇ

ಆಗಸದ ಮಳೆಬಿಲ್ಲಿನಲೂ
ನಿನ ಚೆಲುವಿನ ಪ್ರತಿಬಿ೦ಬ
ಕೈಗೆ ಸಿಗದ೦ತೆ ನಿ೦ತು
ಕರೆಯುವ ಪರಿಯೇ ಚೆ೦ದ
ಬಾನಿನಾ ತಾರೆಯ೦ತೆ
ಮಿ೦ಚಿ ಮರೆಯಾಗುವೆ ಏಕೆ
ನಿನ್ನೊಳಗೆ ನಾನಿರುವೆ೦ಬ
ಸತ್ಯವನು ಮರೆಯುವೆ ಏಕೆ
ಬ೦ದೊಮ್ಮೆ ಸೇರು ನನ್ನುಸಿರೇ

ಕೈ ಹಿಡಿದು ನಡೆಸುವೆ ನಾನು
ಎಳೆ ಮಗುವಿನ೦ತೆ ನಿನ್ನ
ತಪ್ಪಿದರೆ ಸ್ನೇಹಿತನ೦ತೆ
ತಿದ್ದಿ ನಡೆಸುವೆ ನಿನ್ನ
ಜೀವವುಯ್ಯಾಲೆಯ೦ತೆ
ತೂಗುತಿದೆ ಕೇಳೇ ಗೆಳತಿ
ಅದರ ಖುಷಿಯೊಳಗೆ ನೀನು
ಜೊತೆ ಸೇರು ಬಾರೆ ಗೆಳತಿ
ಬಾರೆನ್ನ ಚೆಲುವೇ ನನ್ನೊಲವೇ