ನನ್ನವಳು..ನಾನೇ ಅವಳು..!!
ಕವನ
ಹೀಗೊಂದು ನಿಮ್ಮಂತಿರುವ
ಪುಟ್ಟ ಮನಸ್ಸಿದೆ...!
ಸಂಕಟಕ್ಕೆ ಹೊಯ್ದಾಡುವ...
ದುಃಖಕ್ಕೆ ಖೇದಿಸುವ...
ಸುಖಕ್ಕೆ ನಲಿಯುವ...
ಒಂದು ಮನಸ್ಸಿದೆ..!!
ಬೆಳೆದಾಗ ಅದಕ್ಕೆ ಬಳೆ ತೊಡಿಸುತ್ತೇನೆ.
ಹಿರಿಯಳಾದಾಗ ಅದಕ್ಕೆ ಸೀರೆ ಉಡಿಸುತ್ತೇನೆ.
ರಾತ್ರಿ ಅಲೆಯದಂತೆ,
ಹಗಲು ಹೊರೆಯದಂತೆ,
ಹೊರಗಾಡದಂತೆ ಗೋಡೆಗಳಿಗೆಲ್ಲಾ
ಕಿವಿ ಹಂಚಿದ್ದೇನೆ...!!
ಅವಳ ಉಸಿರು-ಉಸಿರನ್ನೂ
ಬಂಧಿಸಿದ್ದೇನೆ..ಕತ್ತಲಾಯಿತೆಂದು.
ಬಯಕೆಗಳು,ಕನಸುಗಳು
ಹೊಸ್ತಿಲನ್ನಿಟ್ಟಿದ್ದೇನೆ ದಾಟದಂತೆ...
ಅವಳುಡುವ ಪ್ರತಿ ಹಸಿರೆಲೆಯನ್ನು ಹಿಂಡಿ
ಹಳದಿ ವರ್ಣ ಬಳೆದಿದ್ದೇನೆ...!
ಏಕೆಂದರೆ....
ನಾನೂ ಬೆಳೆದಿದ್ದೂ ಹೀಗೇನೆ....!
ಹಾಡಲಾಗದು...ಕಂಠ ಹೋದೀತು...?!
ಆಡಲಾಗದು...ಮಾತು ಹೋದೀತು...?!
ಅಪವಾದಗಳ ದಳಗಳನೇಕ
ಮುಡಿಸಿದ್ದೇನೆ...
ಬಿಲ್ವಪತ್ರೆಗಳಿಂದ ಶಿಂಗರಿಸಿದ್ದೇನೆ...!
ಕಟ್ಟು ಹಾಕಿಸಿ,ಗೋಡೆಗಂಟಿಸಿ
ಪೂಜೆ ಮಾಡುತ್ತೇನೆ....!
ನೀನು ಹೀಗೇ ಇರಬೇಕು...!
ಹೀಗೆ ಹೀಗೇನೇ ಇರಬೇಕೆಂದು....!!!
Comments
ಉ: ನನ್ನವಳು..ನಾನೇ ಅವಳು..!!
ಉ: ನನ್ನವಳು..ನಾನೇ ಅವಳು..!!
In reply to ಉ: ನನ್ನವಳು..ನಾನೇ ಅವಳು..!! by muneerahmedkumsi
ಉ: ನನ್ನವಳು..ನಾನೇ ಅವಳು..!!
ಉ: ನನ್ನವಳು..ನಾನೇ ಅವಳು..!!
ಉ: ನನ್ನವಳು..ನಾನೇ ಅವಳು..!!
ಉ: ನನ್ನವಳು..ನಾನೇ ಅವಳು..!!
ಉ: ನನ್ನವಳು..ನಾನೇ ಅವಳು..!!