ನನ್ನವಳು ಈಗ ಚೆಂದ...

ನನ್ನವಳು ಈಗ ಚೆಂದ...

ಕವನ

ಅವಳು ಚೆಂದ. ಅವಳ ಹೃದಯವು
ಚೆಂದ...

ಆರಂಭದಲ್ಲಿ ಏನೂ ಅನಿಸುತ್ತಿರಲಿಲ್ಲ.
ಈಗ ಯಾಕೋ, ತುಂಬಾ ಚೆನ್ನಾಗಿ
ಕಾಣಿಸುತ್ತಿದ್ದಾಳೆ.

ಇದರ ಗುಟ್ಟೇನು. ಗೊತ್ತಿಲ್ಲ.
ಅದು ನನ್ನಗಷ್ಟೇ ಅಲ್ಲ. ಅವಳಿಗೂ
ತಿಳಿದಿಲ್ಲ...

ಇದು ಅಂದ, ಚೆಂದದ ಮಾತು
ಹೃದಯಕ್ಕೆ ಬಂದ್ರೆ, ಅವಳು ಬಹಳ ಸಾಫ್ಟ್
ನಾನು ತುಂಬಾನೆ ಸ್ಟ್ರಾಂಗ್..

ಯಾಕೆ ಗೊತ್ತೇ...ನನಗೆ ಅವಳ ಹೃದಯ
ಕಾಯೋ ಕೆಲಸ. ಅವಳಿಗೆ ನನ್ನ
ಗಟ್ಟಿ ಇಡೋ ಪ್ರೀತಿ...ಇದುವೇ
ನಮ್ಮ ಚೆಂದನೆ ಬದುಕು..ನನ್ನವಳು
ಯಾಕೋ ಈಗ ತುಂಬಾ ಚೆಂದ...

 

-ರೇವನ್