ನನ್ನವಳು

ನನ್ನವಳು

ಬರಹ

ತುಂಬು ಗೆನ್ನೆಗಳು
ರಂಗೇರಿವೆ
ಅವಳಿ ಸಂಜೆ ಸೂರ್ಯರಂತೆ
ಅದುರುತಿರುವ ಅಧರಗಳು
ಜಿನುಗುತಿವೆ
ಜೇನ ಸವರಿದಂತೆ

ನಲಿನ ನಯನಗಳು
ಮಿನುಗುತಿವೆ
ತಾರೆಗಳ ಸಮ್ಮೇಳದಂತೆ
ನೀಳ ನಾಸಿಕವು
ನಿಂತಂತಿದೆ
ಹಿಮ ಪರ್ವತದಂತೆ

ಎದೆಯುಸಿರಿನ ಏರಿಳಿತಕೆ
ನಾಟ್ಯವಾಡುವಂತೆ
ನಿಂತ ಅವಳು
ಮುಂಗುರುಳ ಜೊತೆ
ಸರಸವಾಡುತಿವೆ
ಕಿರುಬೆರಳು

ಅದರುತ್ತಾ ಬೆದರುತಿವೆ
ಕಣ್ಣ ಕಾವಲಿಗೆ ನಿಂತ
ರೆಪ್ಪೆಗಳು
ಅವಳಂದಕೆ ಸೋತಂತೆ
ಹಿಂಬಾಲಿಸಿದೆ
ಅವಳ ನೆರಳು

ತುಟಿ ಬಿಚ್ಚಿ ಉದುರಿಸಿದರೆ
ಮುತ್ತುಗಳಂತ
ಮುಗುಳ್ನಗು
ಧರೆಗುರುಳುವ ಲತೆಯಂತಾದೆ
ನೋಡಿ
ನನ್ನವಳ ಸೊಬಗು