ನನ್ನಾವೆದನೆ

ನನ್ನಾವೆದನೆ

ಕವನ

 ಒಂಟಿತನದ ನೆರಳ ಬೆಸುಗೆಯಲಿ

ಹೊಯ್ದಾಡುತಿದೆ ಮನದಿ ನೆನಪುಗಳ ನೋವ ಲಹರಿ

ಮರಣೋನ್ಮುಖ ಮುಗುಳ್ನಗೆಯಲಿ

ಮನಕ್ಕನಿಸುತಿದೆ ಮಾಡಿದೆಲ್ಲವು ಒಪ್ಪಿಗೆಯೇ ಸರಿ


ಆಲಿಸುತಿರೆ ಮನದಾಲಪಗಳ ಪಲ್ಲಟ

ಮನದಂಗಳದಿ ಶುರು ಭಾವೊತ್ಖರ್ಷಗಳ ಬಡಿದಾಟ


ಸಾಕೆನಿಸಿ ಕಲ್ಪನೆಯಿಂದ ವಾಸ್ತವಕ್ಕಿಳಿದರೆ

ಮತ್ತದೇ ಒದ್ದಾಟ

ಅರ್ಥಕ್ಕಾಗಿ ಹೇಳವರೊಡನೆ ಹೋರಾಟ


ಜೀವನವೆಂದರೆ ಇಷ್ಟೇನೆ

ಏನ ಮಾಡಿದರು

ಹೇಗೆ ಬದುಕಿದರು

ಕೊನೆಗುಳಿವ ನಿಟ್ಟುಸಿರ ಮಾತದೊಂದೇ

 

 

 


ಲೈಫು ಇಷ್ಟೇನೆ........!!!!!!


 

 

 

Comments