ನನ್ನಿನಿಯ

ನನ್ನಿನಿಯ

ಕವನ

ಬೆರಳು ತೋರಿದರಾಯ್ತು ಹಸ್ತ ನುಂಗುವ ಚತುರ

ಮೀನ ಹೆಜ್ಜೆಯನೀತ ಅರಿಯಬಲ್ಲ

 

ಕೈಗೆ ಮೆತ್ತಲು ಕೆಸರು ದೊರೆಯದುಳಿಯದು ಮೊಸರು

ನಂಬಿಕೆಯ ಒಳಗಿಟ್ಟು ದುಡಿಯಬಲ್ಲ

 

ಕೈಗೆ ಬಂದಿಹ ತುತ್ತು ಕೈತಪ್ಪಿ ಹೋಯ್ತೆಂದು

ಕೈಕಟ್ಟಿ ಕೂರನವ ವಿಧಿಯ ಹಳಿದು

 

ವಿಫಲತೆಯ ಬದಿಗಿಟ್ಟು ಸಫಲತೆಗೆ ಪಣತೊಟ್ಟು

ದುಡಿಮೆಯಲಿ ಯಶ ಗಳಿಸೆ ಅವನ ಪಟ್ಟು

 

ಕಾಯಕವೆ ಕೈಲಾಸ ಎಂಬಂಥ ನುಡಿಮುತ್ತು

ಬದುಕಲ್ಲಿ ಅಳವಡಿಸಿ ನಡೆಯುವಾತ

 

ಮರೆಯುವನು ಸೋಲುಗಳ ಸಿಗದಿರದು ಗೆಲುವೆಂದು

ಸೋಲುಗಳು ಮೆಟ್ಟಿಲದು ಎಂದು ತಿಳಿದು

 

ಮಾತುಗಳು ರಜತವದು ಮೌನವಿದು ಬಂಗಾರ

ನನ್ನಿಯನಾ ಜೊತೆಗೆ ಬಾಳು ಶೃಂಗಾರ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್